ಡಿವೈಎಸ್ಪಿ ಗಣಪತಿ ಪ್ರಕರಣ: ಮಡಿಕೇರಿಯಲ್ಲಿ ಸಿಬಿಐ ಮಹಜರು

ಡಿವೈಎಸ್ಪಿ ಗಣಪತಿ ಪ್ರಕರಣ: ಮಡಿಕೇರಿಯಲ್ಲಿ ಸಿಬಿಐ ಮಹಜರು

CI   ¦    Nov 14, 2017 09:50:30 PM (IST)
ಡಿವೈಎಸ್ಪಿ ಗಣಪತಿ ಪ್ರಕರಣ: ಮಡಿಕೇರಿಯಲ್ಲಿ ಸಿಬಿಐ ಮಹಜರು

ಮಡಿಕೇರಿ: ಡಿವೈಎಸ್ಪಿ ಗಣಪತಿ ಹತ್ಯಾ ಪ್ರಕರಣದ ತನಿಖೆಯನ್ನು ಚುರುಕು ಗೊಳಿಸಿರುವ ಸಿಬಿಐ ಅಧಿಕಾರಿಗಳ ತಂಡ ಮಂಗಳವಾರ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ ವಿನಾಯಕ ಲಾಡ್ಜ್  ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿತು.

ಮಂಗಳವಾರ ನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ವಿನಾಯಕ ಲಾಡ್ಜ್ ಭೇಟಿ ನೀಡಿದ ಸಿಬಿಐ ತನಿಖಾಧಿಕಾರಿ ಎಸಿಪಿ ಕಲೈ ಮಣಿ ನೇತೃತ್ವದ ಹತ್ತು ಮಂದಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ಗಣಪತಿ ಅವರು ಸಾವನ್ನಪ್ಪಿದ ಸಂದರ್ಭ ಸ್ಥಳ ಮಹಜರಿಗೆ ಸಹಿ ಹಾಕಿದವರು ಸೇರಿದಂತೆ ಅಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಗಣಪತಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳನ್ನು ಲಾಡ್ಜ್ ಗೆ ಕರೆಯಿಸಿದ ಸಿಬಿಐ ತಂಡ, ಗಣಪತಿ ಅವರು ಸಾವಿಗೀಡಾಗಿದ್ದ ವಿನಾಯಕ ಲಾಡ್ಜ್ ಕೊಠಡಿ ಸಂಖ್ಯೆ 315 ರಲ್ಲಿ ಪರಿಶೀಲನೆ ನಡೆಸಿತು.

ಅಧಿಕಾರಿಗಳ ತಂಡದೊಂದಿಗೆ ದೆಹಲಿಯಿಂದ ಫಾರೆನ್ಸಿಕ್ ತಜ್ಞರು ಕೂಡ ಆಗಮಿಸಿದ್ದರು. ಲಾಡ್ಜ್ ಕೊಠಡಿಯ ಸೀಲ್ ತೆಗೆದು ಒಳ ಪ್ರವೇಶಿಸಿದ ಅಧಿಕಾರಿಗಳು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳ ಮಹಜರು ನಡೆಸಿದರು.

More Images