ಸಾರಿಗೆ ಬಸ್- ಸ್ಕೂಟರ್ ಅಪಘಾತ: ವಿದ್ಯಾರ್ಥಿಗಳಿಬ್ಬರು ಸಾವು

ಸಾರಿಗೆ ಬಸ್- ಸ್ಕೂಟರ್ ಅಪಘಾತ: ವಿದ್ಯಾರ್ಥಿಗಳಿಬ್ಬರು ಸಾವು

LK   ¦    Jun 23, 2019 10:12:48 AM (IST)
ಸಾರಿಗೆ ಬಸ್- ಸ್ಕೂಟರ್ ಅಪಘಾತ: ವಿದ್ಯಾರ್ಥಿಗಳಿಬ್ಬರು ಸಾವು

ಶ್ರೀರಂಗಪಟ್ಟಣ: ಸಾರಿಗೆ ಬಸ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಕೊತ್ತತ್ತಿ ಶ್ರೀ ವಿದ್ಯಾಗಣಪತಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಪೀಹಳ್ಳಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.

10ನೇ ತರಗತಿ ವಿದ್ಯಾರ್ಥಿ ಬನ್ನಹಳ್ಳಿ ಗ್ರಾಮದ ಶಂಕರ್ ಅವರ ಪುತ್ರ ಬಿ.ಎಸ್. ಮಹೇಂದ್ರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿ, ಮನೋಹರ್ ಅವರ ಪುತ್ರ ಬಿ.ಎಂ. ಸಂದೇಶ್ ಮೃತ ವಿದ್ಯಾರ್ಥಿಗಳು.

ಬನ್ನಹಳ್ಳಿ ಗ್ರಾಮದಿಂದ ತರಗತಿಗೆಂದು ಹೋಂಡಾ ಆಕ್ಟೀವಾ ಸ್ಕೂಟರ್ನ ಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್ ಹಿಂದಿಕ್ಕಲು ಹೋಗಿ ಎದುರಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್‍ ಗೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಿಂದಾಗಿ ಸಂದೇಶ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಬಿ.ಎಸ್. ಮಹೇಂದ್ರನನ್ನು ಮಿಮ್ಸ್ ಗೆ ಚಿಕಿತ್ಸೆಗಾಗಿ ಕರೆತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಈ ಸಂಬಂಧ ಅರಕೆರೆ ಠಾಣಾ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.