ಮಂಗನ ಕಾಯಿಲೆಗೆ ಸಾಗರದ ಮಹಿಳೆ ಬಲಿ

ಮಂಗನ ಕಾಯಿಲೆಗೆ ಸಾಗರದ ಮಹಿಳೆ ಬಲಿ

HSA   ¦    Jan 21, 2019 04:19:08 PM (IST)
ಮಂಗನ ಕಾಯಿಲೆಗೆ ಸಾಗರದ ಮಹಿಳೆ ಬಲಿ

ಸಾಗರ/ಉಡುಪಿ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ತಾಲೂಕಿನ ಅರಲಗೋಡಿನ ಲಕ್ಷ್ಮೀದೇವಿ(82) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ಮಂಗನ ಕಾಯಿಲೆಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ಮಣಿಪಾಲ ಆಸ್ಪತ್ರೆಯಲ್ಲಿ ಸಾಗರ ತಾಲೂಕಿನ ಆಸುಪಾಸಿನವರು ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ವರದಿಯಾಗಿದೆ.

ಇದುವರೆಗೆ ಸುಮಾರು 76 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.