ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ರೂ. ಮದ್ಯ ಸಹಿತ ಇಬ್ಬರ ಸೆರೆ

ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ರೂ. ಮದ್ಯ ಸಹಿತ ಇಬ್ಬರ ಸೆರೆ

SB   ¦    Oct 11, 2018 07:17:31 PM (IST)
ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ರೂ. ಮದ್ಯ ಸಹಿತ ಇಬ್ಬರ ಸೆರೆ

ಕಾರವಾರ: ಉತ್ತರ ಕನ್ನಡ ಜೋಯಿಡಾ ತಾಲೂಕಿನ ಅನಮೋಡ್ ಚೆಕ್‌ಪೋಸ್ಟ್ ಮೂಲಕ ಸಾಗಾಟವಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋವಾದಿಂದ ಜಿಲ್ಲೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಲಾರಿಯನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಸುಮಾರು 12.66 ಲಕ್ಷ ರೂ. ಮೌಲ್ಯದ 190 ಬಾಕ್ಸ್‌ಗಳಲ್ಲಿದ್ದ 1641 ಲೀ. ಗೋವಾ ಮದ್ಯ ಹಾಗೂ 12 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳಾದ ಮಹಾರಾಷ್ಟ್ರ ಮೂಲದ ಸಚಿನ ಲಕ್ಷ್ಮಣ ಅಟ್ಕೆ(32) ಹಾಗೂ ಅಮರ ಪ್ರಕಾಶ ಯಾದ್ಗೆ(32) ಇವರನ್ನು ಬಂಧಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಎಲ್.ಎ. ಮಂಜುನಾಥ ತಿಳಿಸಿದರು.