ರಾಜಕೀಯದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಬಿಡಲ್ಲ: ಎಂ.ವೈ.ಪಾಟೀಲ

ರಾಜಕೀಯದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಬಿಡಲ್ಲ: ಎಂ.ವೈ.ಪಾಟೀಲ

HSA   ¦    May 25, 2019 06:10:17 PM (IST)
ರಾಜಕೀಯದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಬಿಡಲ್ಲ: ಎಂ.ವೈ.ಪಾಟೀಲ

ಕಲಬುರ್ಗಿ: ನನ್ನ ರಾಜಕೀಯದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಬಿಡುವುದಿಲ್ಲ ಮತ್ತು ಬಿಜೆಪಿ ಸೇರುತ್ತೇನೆ ಎನ್ನುವುದು ಸುಳ್ಳು ಎಂದು ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ ಸ್ಪಷ್ಟಪಡಿಸಿದರು.

ಈ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರುತ್ತಿರುವುದು ಸುದ್ದ ಸುಳ್ಳು, ನನ್ನು ಬಿಜೆಪಿಯವರು ಸಂಪರ್ಕಿಸಿಲ್ಲ ಎಂದರು.

ಬಿಜೆಪಿ ಅಫ್ಜಲಪುರದಲ್ಲಿ 35 ಸಾವಿರ ಮತಗಳ ಲೀಡ್ ಪಡೆದಿದೆ. ಇದರ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಇಲ್ಲಿ ನನ್ನ ಚುನಾವಣೆಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ. ಆದರೆ ಜನರ ತೀರ್ಪು ವ್ಯತಿರಿಕ್ತವಾಗಿತ್ತು ಎಂದು ಹೇಳಿದರು.

ಕಾರ್ಯಕರ್ತರ ಜತೆ ಸಮಾಲೋಚಿಸಲು ಸಭೆ ಕರೆದಿದ್ದೇನೆ. ಕಾರ್ಯಕರ್ತರು ಬಿಜೆಪಿ ಸೇರಿ ಎಂದು ಒತ್ತಾಯ ಮಾಡಿದರೂ ನಾನು ಅವರ ಮನವೊಲಿಸಿ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದರು.