ಎರಡು ತಿಂಗಳ ರಜೆಯಲ್ಲಿ ತೆರಳಿದ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ

ಎರಡು ತಿಂಗಳ ರಜೆಯಲ್ಲಿ ತೆರಳಿದ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ

CI   ¦    Jan 11, 2019 06:38:53 PM (IST)
ಎರಡು ತಿಂಗಳ ರಜೆಯಲ್ಲಿ ತೆರಳಿದ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಎರಡು ತಿಂಗಳ ರಜೆಯಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿದ್ದ ವಿದ್ಯಾ ಅವರು, ಅತಿವೃಷ್ಟಿ ಹಾನಿಯ ಸಂಕಷ್ಟದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ತಮ್ಮ ಸ್ವಂತ ಕಾರ್ಯಗಳಿಗಾಗಿ ರಜೆಯನ್ನೇ ಪಡೆಯದಿದ್ದ ಜಿಲ್ಲಾಧಿಕಾರಿಗಳು ಇದೀಗ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಜೆಯಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಸಣ್ಣ ಮಗುವನ್ನು ಹೊಂದಿರುವ ಅವರು ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಕರ್ತವ್ಯ ನಿಷ್ಠೆಯನ್ನು ಮೆರೆದು ಜನಪ್ರಿಯರಾಗಿದ್ದರು. ಆದರೆ ಈಗ ದಿಢೀರ್ ಆಗಿ ಎರಡು ತಿಂಗಳು ರಜೆಯನ್ನು ಹಾಕುವ ಮೂಲಕ ಆಶ್ಚರ್ಯವನ್ನು ಮೂಡಿಸಿದ್ದಾರೆ. ಮಳೆಹಾನಿ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾರ್ಯ ಮತ್ತು ಪರಿಹಾರ ಕಾರ್ಯಗಳು ನಡೆಯುತ್ತಿರುವಾಗಲೇ ಖಡಕ್ ಅಧಿಕಾರಿ ಶ್ರೀವಿದ್ಯಾ ಅವರ ಅನುಪಸ್ಥಿತಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಬಹುದು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಹಂಗಾಮಿ ಜಿಲ್ಲಾಧಿಕಾರಿಯಾಗಿ ಎರಡು ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ.