ಭಟ್ಕಳದ ಇಬ್ಬರಲ್ಲಿ ಕೋವಿಡ್-19 ವೈರಸ್ ಸೋಂಕು ಪತ್ತೆ

ಭಟ್ಕಳದ ಇಬ್ಬರಲ್ಲಿ ಕೋವಿಡ್-19 ವೈರಸ್ ಸೋಂಕು ಪತ್ತೆ

SB   ¦    Mar 24, 2020 01:10:41 PM (IST)
ಭಟ್ಕಳದ ಇಬ್ಬರಲ್ಲಿ ಕೋವಿಡ್-19 ವೈರಸ್ ಸೋಂಕು ಪತ್ತೆ

ಕಾರವಾರ:ದುಬೈನಿಂದ ಭಟ್ಕಳಗೆ ಬಂದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ಹರೀಶ್‍ಕ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ.21ಕ್ಕೆ ದುಬೈನಿಂದ ಭಟ್ಕಳಗೆ ಬಂದ 40 ವರ್ಷದ ಹಾಗೂ 65 ವ್ಯಕ್ತಿಗಳಿಗೆ ಈ ಸೊಂಕು ಇರುವ ಬಗ್ಗೆ ದೃಢಪಟ್ಟಿದೆ. 21 ರಂದು 40 ವರ್ಷದ ವ್ಯಕ್ತಿಯು ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿಂದ ಭಟ್ಕಳಕ್ಕೆ ಬಂದಿದ್ದರು. ಅಲ್ಲದೆ ಇನ್ನೊಬ್ಬ 65 ವರ್ಷದ ವ್ಯಕ್ತಿಯು ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿಂದ ರೈಲಿನ ಮೂಲಕ ಭಟ್ಕಳ ತಲುಪಿದ್ದ ಎನ್ನಲಾಗಿದೆ.

ಇವರು ದುಬೈನಿಂದ ವಾಪಸ್ಸಾಗಿದ್ದ ದಿನವೇ ಮಾ. 21 ರಂದು ತಾವಾಗಿಯೇ ಮುಂದೆ ಬಂದು ಕೊರೊನಾ ವೈರಾಣು ಪರೀಕ್ಷೆಗಾಗಿ ಆಸ್ಪತ್ರೆಗೆ ಹಾಜರಾಗಿದ್ದರು. ಇವರನ್ನು ಆಸ್ಪತ್ರೆಯಲ್ಲಿ ತಪಾಸಿಸಲಾಗಿ ಇವರ ಕಫದ ಪರೀಕ್ಷೆಯ ಫಲಿಂತಾಶ ಇಂದು ಹೊರಬಂದಿದ್ದು, ಇವರಿಗೆ ಕೊರೊನಾ ವೈರಾಣು ಇರುವ ಬಗ್ಗೆ ದೃಢಪಟ್ಟಿದೆ.

ಅಲ್ಲದೆ ವಿದೇಶದಿಂದ ವಾಪಸ್ಸಾಗಿದ್ದ ಜನರಿಗೂ ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಭಟ್ಕಳ್ ಉಪ ವಿಭಾಗವನ್ನು ಲಾಕ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಗಾಭರಿಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಂಕಿತರ ಮನೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಫ್ಯುಮಿಗೇಷನ್ ಮಾಡಲಾಗುವುದು ಈ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.