ಮಗ ಪ್ರೀತಿ ಮಾಡಿ ಮದುವೆ ಆಗಿದ್ದಕ್ಕೆ ವಿಷ ಸೇವಿಸಿದ ತಂದೆ ಸಾವು!

ಮಗ ಪ್ರೀತಿ ಮಾಡಿ ಮದುವೆ ಆಗಿದ್ದಕ್ಕೆ ವಿಷ ಸೇವಿಸಿದ ತಂದೆ ಸಾವು!

YK   ¦    Mar 13, 2018 03:44:52 PM (IST)
ಮಗ ಪ್ರೀತಿ ಮಾಡಿ ಮದುವೆ ಆಗಿದ್ದಕ್ಕೆ ವಿಷ ಸೇವಿಸಿದ ತಂದೆ ಸಾವು!

ಶಿವಮೊಗ್ಗ: ಮಗ ಪ್ರೀತಿ ಮಾಡಿ ಮದುವೆಯಾಗಿದ್ದಕ್ಕೆ ಹುಡುಗಿ ಕಡೆಯವರ ಕಿರುಕುಳ ತಾಳಲಾರದೆ ತಂದೆ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತ ಕುಮಾರಪ್ಪ ಎಂಬವರ ಪುತ್ರ ದಶರಥ ಪಕ್ಕದ ಮಾರಶೆಟ್ಟಿ ಹಳ್ಳಿಯ ಸಿಂಧು ಎಂಬ ಯುವತಿಯನ್ನು ಪ್ರೀತಿಸಿ ಇಬ್ಬರು ನಾಪತ್ತೆಯಾಗಿದ್ದರು. ದಶರಥ ಎಲ್ಲಿದ್ದಾನೆ ಎಂದು ತಿಳಿಸುವಂತೆ ಆತನ ತಂದೆ ಕುಮಾರಪ್ಪ ಹಾಗೂ ನೀಲಾವತಿಗೆ ಹೊಳೆಹೊನ್ನೂರು ಪೊಲೀಸರು ಹಾಗೂ ಸಿಂಧು ಮನೆಯವರು ಕಿರುಕುಳ ನೀಡಿದ್ದಾರೆ. ಇವರ ಕಿರುಕುಳ ತಾಳಲಾರದೆ ದಶರಥ ತಂದೆ ತಾಯಿ ಕುಮಾರಪ್ಪ ಹಾಗೂ ನೀಲಾವತಿ ಕಳೆದ ವಾರ ವಿಷ ಸೇವಿಸಿದ್ದರು. ತೀವ್ರವಾಗಿ ಆಸ್ವಸ್ಥಗೊಂಡಿದ್ದ ಇವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇದಿಗ ಚಿಕಿತ್ಸೆ ಫಲಕಾರಿಯಾಗದೇ ಕುಮಾರಪ್ಪ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಇತ್ತ ನಾಪತ್ತೆಯಾಗಿದ್ದ ಯುವ ಪ್ರೇಮಿಗಳು ಬೆಂಗಳೂರಿನ ಓಂಶಕ್ತಿ ದೇವಾಲಯದಲ್ಲಿ ಮದುವೆ ಆಗಿ ಬಂದಿದ್ದಾರೆ. ಪ್ರಾಣ ಬೆದರಿಕೆ ಇರುವುದರಿಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಕೊಟ್ಟು, ಪೊಲೀಸ್ ರಕ್ಷಣೆಯಲ್ಲಿ ಗ್ರಾಮಕ್ಕೆ ಮರಳಿ ಹೋಗಲು ನಿರ್ಧರಿಸಿದ್ದಾರೆ.