ದೋಣಿ ದುರಂತ: 13ಕ್ಕೇರಿದ ಸಾವಿನ ಸಂಖ್ಯೆ; ಮುಂದುವರಿದ ಶೋಧ ಕಾರ್ಯ

ದೋಣಿ ದುರಂತ: 13ಕ್ಕೇರಿದ ಸಾವಿನ ಸಂಖ್ಯೆ; ಮುಂದುವರಿದ ಶೋಧ ಕಾರ್ಯ

SB   ¦    Jan 22, 2019 05:33:53 PM (IST)
ದೋಣಿ ದುರಂತ: 13ಕ್ಕೇರಿದ ಸಾವಿನ ಸಂಖ್ಯೆ; ಮುಂದುವರಿದ ಶೋಧ ಕಾರ್ಯ

ಕಾರವಾರ: ಕೂರ್ಮಗಡ ಹತ್ತಿರ ದೋಣಿ ಮುಳುಗಿ ಮೃತಪಟ್ಟವರ‌ ಸಂಖ್ಯೆ ಏರುತ್ತಲೇ ಇದ್ದು,‌‌ ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟು ಐದು ಮೃತ ದೇಹಗಳು ಪತ್ತೆಯಾಗಿವೆ. ಸಮುದ್ರ ದುರಂತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಮಂಗಳವಾರ ಬೆಳಗ್ಗೆಯಿಂದಲೇ ಪೊಲೀಸ್ ಕೋಸ್ಟ್ ಗಾರ್ಡ್ ಕೀಬೋರ್ಡ್ ಮೀನುಗಾರಿಕೆ ಇಲಾಖೆ ಜಿಲ್ಲಾಡಳಿತವೂ ಮೃತರ ಶವ ಪತ್ತೆ ತೀವ್ರ ಹುಡುಕಾಟ ನಡೆಸಿದ್ದರು. ಸಮುದ್ರದ ಬೇರೆ ಬೇರೆ ಭಾಗದಲ್ಲಿ ಶವಗಳು ಪತ್ತೆಯಾಗಿದೆ.

ಹಾವೇರಿ ಮೂಲದ ಬಾಲಕ ಕಿರಣ್(5) ಶವವು ಲೈಟ್ ಹೌಸ್ ಬಳಿ, ಪರಶುರಾಮ್(35) ಶವ ಅಳ್ವೆವಾಡ ಬಳಿ, ಶ್ರೇಯಸ್ ಪಾವಸ್ಕರ್(28) ಶವ ದೇವಭಾಗ್ ಬಳಿ, ಸಂಜೀವಿನಿ(4) ಹಾಗೂ ಸೌಜನ್ಯ(12) ಮೃತ ದೇಹವು ಕೂರ್ಮಗಡದಲ್ಲಿ ಪತ್ತೆಯಾಗಿವೆ. ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಜಿಲ್ಲಾಡಳಿತ ರಚಿಸಿರುವ ತಂಡವು ಇನ್ನಷ್ಟು ಶೋಧ ಕಾರ್ಯ ಮುಂದುವರಿಸಿದ್ದಾರೆ.

ನೌಕಾದಳದ ಹೆಲಿಕಾಪ್ಟರ್, ಭಾರತೀಯ ತಟ ರಕ್ಷಕ ದಳದ ಸಿ- 155, ಸಿ- 420, ಸಿ- 123 ದೋಣಿಗಳೂ, ಕೋಸ್ಟ್ ಗಾರ್ಡ್ ನ ಬೋಟ್, ನೌಕಾಸೇನೆಯ ತಿಲಂಚಾಂಗ್ ಬೋಟ್ ಗಳೂ ಸೋಮವಾರ ರಾತ್ರಿಯಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಸೋಮವಾರ ನಡೆದ ದುರಂತದಲ್ಲಿ ಒಟ್ಟು 16 ಜನರನ್ನು ರಕ್ಷಣೆ ಮಾಡಲಾಗಿದೆ. ದುರಂತ ನಡೆದ ದಿನವೇ ಒಟ್ಟು ಎಂಟು ಮೃತದೇಹ ಪತ್ತೆಯಾಗಿತ್ತು.

More Images