ಮಹಾಮಳೆಯ ಅನಾಹುತ ತಪ್ಪಿಸಲು ತಲಕಾವೇರಿಯಲ್ಲಿ ವಿಶೇಷ ಪೂಜೆ

ಮಹಾಮಳೆಯ ಅನಾಹುತ ತಪ್ಪಿಸಲು ತಲಕಾವೇರಿಯಲ್ಲಿ ವಿಶೇಷ ಪೂಜೆ

CI   ¦    Sep 12, 2019 05:33:57 PM (IST)
ಮಹಾಮಳೆಯ ಅನಾಹುತ ತಪ್ಪಿಸಲು ತಲಕಾವೇರಿಯಲ್ಲಿ ವಿಶೇಷ ಪೂಜೆ

ಮಡಿಕೇರಿ:  ಕಳೆದ ಎರಡು ವರ್ಷಗಳ ಮಹಾಮಳೆಯಿಂದ ಕಂಗೆಟ್ಟಿರುವ ಕೊಡಗನ್ನು ಪ್ರಾಕೃತಿಕ ವಿಕೋಪದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದ ಮಾನವ, ಜಾನುವಾರು ಜೀವಹಾನಿಯಾಗಿದ್ದು, ಕೃಷಿ ಕ್ಷೇತ್ರ ಹಾಗೂ ತೋಟಗಳು ಕೊಚ್ಚಿ ಹೋಗಿವೆ. ಭವಿಷ್ಯದ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂದು ಜಿಲ್ಲೆಯ ಜನ ಚಿಂತಾಕ್ರಾಂತರಾಗಿದ್ದಾರೆ. ಈ ರೀತಿಯ ಪರಿಸ್ಥಿತಿ ಮುಂದೆ ಬಾರದಿರಲಿ ಮತ್ತು ಜಿಲ್ಲೆಯ ಜನ ನೆಮ್ಮದಿಯಿಂದ ಬದುಕುವಂತ್ತಾಗಲಿ ಎಂದು ಭಕ್ತಸಮೂಹ ಬೇಡಿಕೊಂಡಿತು.

ಕುಲದೇವಿ ಎನಿಸಿರುವ ಕಾವೇರಿ, ಮಹಾಗಣಪತಿ ಮತ್ತು ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಶಾಂತಾಚಾರ್ ಹಾಗೂ ಟಿ.ಎಸ್.ನಾರಾಯಣಾಚಾರ್ ವಿಶೇಷ ಪೂಜೆ ಸಲ್ಲಿಸಿದರು. ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ಪ್ರಾರ್ಥಿಸಿದರು.