ಪೂರ್ವಜರನ್ನು ಹುಡುಕಿಕೊಂಡು ಭಾರತಕ್ಕೆ ಬಂದ ವಿದೇಶಿ ಮಹಿಳೆ!

ಪೂರ್ವಜರನ್ನು ಹುಡುಕಿಕೊಂಡು ಭಾರತಕ್ಕೆ ಬಂದ ವಿದೇಶಿ ಮಹಿಳೆ!

RK   ¦    Jan 11, 2017 05:03:46 PM (IST)

ಚಿಕ್ಕಮಗಳೂರು: ಅದು ಬರೋಬ್ಬರಿ ಎರಡೂ ದಿನಗಳ ಪ್ರಯಾಣ,ಪೂರ್ವಜರು ಭಾರತೀಯರು ಈಕೆಯದು ಫ್ರೇಂಚ್ ಕೆರೆಬಿಯನ್ ದೇಶ ಮಾರ್ಟಿನಿಕ್ ದ್ವೀಪದವಳು. ತನ್ನ ಎಲ್ಲ ಪೂರ್ವಜರನ್ನು ನೋಡುವ ಆಸೆ ಆದ್ರೆ ಅದು ಯಾವುದಕ್ಕೂ ಕಾಲ ಕೂಡಿ ಬಂದಿರಲಿಲ್ಲ ಆದ್ರೆ ಮೋದಿ ಅವರ ಅಂತಾರಾಷ್ಟ್ರೀಯ ಪ್ರವಾಸಿ ದಿವಸ್ ಈ ವಿದೇಶಿ ಮಹಿಳೆಯ ಕನಸು ನನಸು ಮಾಡಲು ಅಡಿಪಾಯ ಹಾಕಿಕೊಟ್ಟಿದೆ.

ಈಕೆಯ ಹೆಸರು ಡಯಾನ ರಾಮಸ್ವಾಮಿ ಮೂಲತ: ಫ್ರೆಂಚ್  ಕೆರೆಬಿಯನ್ ದೇಶದ ಮಾರ್ಟಿನಿಕ್ ದ್ವೀಪದ ಮಹಿಳೆ. ಈಕೆಯ ಪೂರ್ವಜರು ಎಲ್ಲರೂ ಭಾರತ ದೇಶದವರು. ಈಕೆಯ 5 ತಲೆ ಮಾರಿನ ಜನರು ಫ್ರೆಂಚ್ ಕೆರೆಬಿಯನ್ ದೇಶದ ಮಾರ್ಟಿನಿಕ್ ದ್ವೀಪದಲ್ಲಿಯೇ ವಾಸವಾಗಿದ್ದಾರೆ. ಭಾರತ ದೇಶದಿಂದಾಗಿ ವಲಸೆ ಹೋಗಿ ಅಲ್ಲಿಯೇ ನೆಲೆಯನ್ನು ಕಂಡು ಕೊಂಡಿದ್ದಾರೆ. ಆದ್ರೆ ಈಕೆಯ ಪೂರ್ವಜರು ಭಾರತ ದೇಶದಲ್ಲಿಯೇ ಇದ್ದಾರೆ ಅವರ ಬೇರನ್ನು ಹುಡುಕುವ ಹಂಬಲದಲ್ಲಿದ್ದಾಗ ಯಾವುದಕ್ಕೂ ಕಾಲ ಸರಿಯಾಗಿ ಕೂಡಿ ಬಂದಿರಲಿಲ್ಲ. ಈಕೆಯ ದೇಶದಲ್ಲಿ ಡಯಾನ ರಾಮಸ್ವಾಮಿ ಲಿಟ್ ರೆಚರ್ ನಲ್ಲಿ ಪಿಹೆಚ್ ಡಿ ಅಂಟಿಲಾಸ್ ಯುನಿವರ್ಸಿಟಿಯಲ್ಲಿ  ಉಪನ್ಯಾಸವನ್ನು ಮಾಡಿದ್ದಾಳೆ. ನಂತರ ಕಾಫೀ ಉದ್ಯಮದಲ್ಲಿ ಆಸಕ್ತಿ ಹೊಂದಿ ಉಪನ್ಯಾಸವನ್ನು ಬಿಟ್ಟು ಈಗ ಕಾಫೀ ಬೆಳೆಯನ್ನು ಆ ದೇಶದಲ್ಲಿಯೇ ಬೆಳೆಯುತ್ತಿದ್ದಾಳೆ. ಈಕೆಯ ಗಂಡನ ಹೆಸರು ರಾಮಸ್ವಾಮಿ ಇವರಿಗೆ ಮೂರು ಜನ ಮಕ್ಕಳಿದ್ದು ಇಂದಿರಾ,ರಾಜೀವ್,ರಾಜೇಂದ್ರ ಅವರ ಹೆಸರುಗಳಾಗಿವೆ. ಎಲ್ಲರಿಗೂ ಭಾರತೀಯ ಹೆಸರುಗಳನ್ನೇ ಇಡಲಾಗಿದೆ. ಪ್ರೀಮಿಯಮ್ ಕಾಫೀ ಉದ್ಯಮದಲ್ಲಿ ಈಕೆ ಮಾರ್ಟಿನಿಕ್ ದ್ವೀಪದಲ್ಲಿ ತೊಡಗಿದ್ದಾಳೆ.

ಇವರ ಪೂರ್ವಜರು ತಮಿಳು ನಾಡಿನ ಪುದುಚೇರಿ ಅವರು ಈಕೆಗೆ ಅವರನ್ನು ನೋಡುವ ಹಂಬಲವಿದೆ. ಆದ್ರೆ ಕಾಲ ಕೂಡಿ ಬಂದಿರಲಿಲ್ಲ. ಆದ್ರೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಪ್ರವಾಸಿ ಭಾರತೀಯ ದಿವಾಸ್ ಉತ್ಸವ ಮಾತ್ರ ಆಗಿರಲಿಲ್ಲ, ಭಾರತೀಯ ಮೂಲದ ಜನರಿಗೆ ತಮ್ಮ ಮೂಲ ಬೇರುಗಳನ್ನು ಅರಿಯುವ ಮಹತ್ತರ ಅವಕಾಶವನ್ನು ಕಲ್ಲಿಸಿಕೊಟ್ಟಂತೆ ಕಾಣುತ್ತಿದೆ.ಇದೇ ಸಮಾವೇಶದ ಮೂಲಕ ಡಯನಾ ರಾಮಸ್ವಾಮಿ ತಮ್ಮ ಪೂರ್ವಜನರನ್ನು ಹುಡುಕುವ ಕೆಲಸವನ್ನು ಆರಂಭಿಸಿದ್ದಾಳೆ. ಪ್ರಧಾನಿ ಮೋದಿಯವರನ್ನ ಕಂಡರೇ ಈಕೆಗೆ ಎಲ್ಲಿಲ್ಲದ ಪ್ರೀತಿ ಅವರ ದೊಡ್ಡ ಅಭಿಮಾನಿ ಅವರನ್ನು ನೋಡುವ ಆಸೆಯಿಂದಾ ಫ್ರೆಂಚ್ ಕೆರೆಬಿಯನ್ ನ ಮಾರ್ಟಿನಿಕ್ ದ್ವೀಪದಿಂದ ಆಗಮಿಸಿದ್ದು ಮತ್ತು ಇವರ ಪೂರ್ವಜನರನ್ನು ಹುಡುಕುವ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ್ದಾಳೆ.

ಈಕೆಯ ಪೂರ್ವಜರು ತಮಿಳುನಾಡಿದ ಪುದುಚೇರಿಯವರೋ ಅಥವಾ ಬೇರೆ ರಾಜ್ಯದವರೋ ಗೊತ್ತಿಲ್ಲ. ಆದ್ರೆ ತಮ್ಮ ತಾತ ಮುತ್ತಾತ ಎಲ್ಲರೂ ಭಾರತೀಯರು ಎಂಬುದಷ್ಟೇ ಗೊತ್ತಿದೆ. ಇವರು ವಾಸವಾಗಿರುವ ಮಾರ್ಟಿನಿಕ್ ಪ್ರದೇಶದಲ್ಲಿ 25 ಸಾವಿರಕ್ಕೂ ಅಧಿಕ ಭಾರತೀಯರು ಇದ್ದಾರೆ. ಆದ್ರೆ ಅವರಿಗೆ ಭಾರತದಲ್ಲಿ ಯಾವ ಪ್ರದೇಶದವರು ಎಂಬುದು ತಿಳಿದಿಲ್ಲ. ಮಾರ್ಟಿನಿಕ್ ನಲ್ಲಿ ಭಾರತೀಯತೆ ಜೀವಂತವಾಗಿದೆ ಭಾರತದ ಯೋಗ, ಭರತನಾಟ್ಯ, ಹೋಳಿ ಹುಣ್ಣಿಮೆಗಳು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಡಯಾನ ರಾಮಸ್ವಾಮಿ ಸ್ವತ: ಅವರೇ ತಮ್ಮ ಮೂಲವನ್ನು ಹುಡುಕುವ ಪ್ರಯತ್ನದಲ್ಲಿದ್ದು, ಇಂದು ಅವರು ತಮಿಳುನಾಡಿನ ಪುದುಚೇರಿಗೆ ಪ್ರಯಾಣವನ್ನು ಬೆಳೆಸಲಿದ್ದಾರೆ. ಒಟ್ಟಾರೆಯಾಗಿ ತಮ್ಮ ಮೊದಲಿಗೆ ತಮ್ಮ ವೃತ್ತಿಯಾದ ಕಾಫೀ ತೋಟಗಳತ್ತ ಗಮನ ಹರಿಸಿದ್ದು, ಚಿಕ್ಕಮಗಳೂರಿನ ಕಾಫೀ ತೋಟಗಳ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಅರಿತಾಗ ಮಹಿಳೆಯರೇ ನಿರ್ವಹಿಸುತ್ತಿರುವ ಕಾಫೀ ಬೇರಿ ಗೆ ಆಗಮಿಸಿದ್ದು ಇಲ್ಲಿಯೇ ಉಳಿದು ಕೊಂಡಿದ್ದಾರೆ. ಇಲ್ಲಿನ ಕಾಫೀಯನ್ನು ಸವಿದು ತಮ್ಮ ಪೂರ್ವಜನರನ್ನು ನೋಡಲು ಹೊರಟಿದ್ದಾರೆ. ಇದಕ್ಕೆ ನಾವು ಸಹಾಯ ಮಾಡುತ್ತೇವೆ ಎಂದೂ ಕಾಫೀ ಬೇರಿ ತೋಟದ ಮಾಲೀಕರು ಭರವಸೆ ನೀಡಿದ್ದು ಡಯಾನ ಳಿಗೆ ತಮ್ಮ ಪೂರ್ವಜನರನ್ನು ಭೇಟಿ ಆಗುವಲ್ಲಿ ಯಶಸ್ವಿ ಆಗುತ್ತಾಳ ಎಂಬುದನ್ನು ಕಾದು ನೋಡಬೇಕಿದೆ.