ಕಾಸರಗೋಡಿನಲ್ಲಿ ಕೊರೋನಾ ವೈರಸ್ ನ ಮತ್ತೆ ಆರು ಪ್ರಕರಣ ಪತ್ತೆ

ಕಾಸರಗೋಡಿನಲ್ಲಿ ಕೊರೋನಾ ವೈರಸ್ ನ ಮತ್ತೆ ಆರು ಪ್ರಕರಣ ಪತ್ತೆ

SK   ¦    Mar 24, 2020 08:08:42 PM (IST)
ಕಾಸರಗೋಡಿನಲ್ಲಿ ಕೊರೋನಾ ವೈರಸ್ ನ ಮತ್ತೆ ಆರು ಪ್ರಕರಣ ಪತ್ತೆ

ಕಾಸರಗೋಡು:  ಜಿಲ್ಲೆಯಲ್ಲಿ ಇಂದೂ ಕೂಡಾ ಆರು ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ.

ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44ಕ್ಕೇರಿದೆ. ಇಂದು ಬಂದ 14 ಪಾಸಿಟಿವ್ ಪ್ರಕರಣಗಳಲ್ಲಿ ಆರು ಕಾಸರಗೋಡಿಗೆ  ಸೇರಿವೆ. ಈ ಪೈಕಿ  ಎಂಟು ಮಂದಿ ದುಬೈ ಮತ್ತು ಓರ್ವ ಕತಾರ್ ನಿಂದ ಆಗಮಿಸಿದವರು.

ಮೂವರು ಸೋಂಕಿತರ ಸಂಪರ್ಕದಿಂದ ಬಂದವರಾಗಿದ್ದಾರೆ. ಸೋಂಕಿತರಲ್ಲಿ ಓರ್ವ ಆರೋಗ್ಯ ಇಲಾಖಾ ಸಿಬಂದಿ ಒಳಗೊಂಡಿದ್ದಾರೆ. ಇದರಿಂದ ಕೇರಳದಲ್ಲಿ ಸೋಂಕಿತರ ಸಂಖ್ಯೆ  105ಕ್ಕೇರಿದೆ.

ಜಿಲ್ಲೆಯಲ್ಲಿ 2736 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 85 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ . ಇಂದು 99 ಮಂದಿಯ ಸ್ಯಾಂಪಲ್ ಗಳನ್ನು  ತಪಾಸಣೆಗೆ ಕಳುಹಿಸಲಾಗಿದೆ.