ಅಣ್ಣಾವ್ರಿಗೆ ಜನ್ಮದಿನದ ಸಂಭ್ರಮ: ಡಾ.ರಾಜ್ ಬಗ್ಗೆ ಒಂದಿಷ್ಟು

ಅಣ್ಣಾವ್ರಿಗೆ ಜನ್ಮದಿನದ ಸಂಭ್ರಮ: ಡಾ.ರಾಜ್ ಬಗ್ಗೆ ಒಂದಿಷ್ಟು

SRJ   ¦    Apr 24, 2018 05:18:04 PM (IST)
ಅಣ್ಣಾವ್ರಿಗೆ ಜನ್ಮದಿನದ ಸಂಭ್ರಮ: ಡಾ.ರಾಜ್ ಬಗ್ಗೆ ಒಂದಿಷ್ಟು

ಕನ್ನಡ ಚಿತ್ರರಂಗದ ಮೇರು ನಟ, ನಟ ಸಾರ್ವಭೌಮ, ವರನಟ, ಗಾನ ಗಂಧರ್ವ ಅಂತೆಲ್ಲಾ ಬಿರುದು ಗಳಿಸಿರುವ ನಮ್ಮೆಲ್ಲರ ಮೆಚ್ಚಿನ ನಟ ಡಾ.ರಾಜ್ ಕುಮಾರ್ ಅವರಿಗೆ ಇಂದು (ಎಪ್ರಿಲ್ 24) ಜನ್ಮದಿನದ ಸಂಭ್ರಮ.

ಕೋಟ್ಯಾಂತರ ಜನರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿರುವ ಡಾ.ರಾಜ್ ಅವರಿಗೆ ಬರೀ ಜನಸಾಮಾನ್ಯರು ಮಾತ್ರವಲ್ಲದೇ, ಸಿನಿಮಾ ತಾರೆಯರು ಹಾಗೂ ದೊಡ್ಡ-ದೊಡ್ಡ ವ್ಯಕ್ತಿಗಳು ಕೂಡ ಅಭಿಮಾನಿಗಳಾಗಿದ್ದಾರೆ.

ಕನ್ನಡ ಭಾಷೆ ಗೊತ್ತಿಲ್ಲದವರು ಕೂಡ ಅಪ್ಪಾಜಿ ಅವರ ಬಗ್ಗೆ ತಿಳಿದುಕೊಳ್ಳುತ್ತಾರೆ. ಕನ್ನಡ ಸಿನಿಮಾ ನೋಡದವರು ಕೂಡ ಡಾ.ರಾಜ್ ಅವರ ಸಿನಿಮಾ ನೋಡಲು ಇಚ್ಛಿಸುತ್ತಾರೆ. ಇಂತಹ ಮೇರು ನಟನ ಹುಟ್ಟುಹಬ್ಬವನ್ನು ಯಾವುದೇ ಬೇದ-ಭಾವ ಮಾಡದೇ ಬಹಳ ಸಂಭ್ರಮದಿಂದ ಅಭಿಮಾನಿಗಳು ಎಲ್ಲೆಡೆ ಆಚರಿಸುತ್ತಾರೆ.

ಇಂತಹ ಅದ್ಭುತ ನಟ ಹಲವಾರು ಪ್ರಶಸ್ತಿಗಳಿಗೆ ಕೂಡ ಭಾಜನರಾಗಿದ್ದಾರೆ. ಡಾ.ರಾಜ್ ಅವರು 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅಣ್ಣಾವ್ರಿಗೆ ಲಭಿಸಿದ್ದು, ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಇವರ 'ಬಂಗಾರದ ಮನುಷ್ಯ' ಸಿನಿಮಾ ಕನ್ನಡದಲ್ಲಿ ಅತೀ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ. 1972 ರಲ್ಲಿ ತೆರೆಕಂಡ ಈ ಸಿನಿಮಾ ಸುಮಾರು 2 ವರ್ಷಗಳ ಕಾಲ ಒಂದೇ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ವರನಟ ಡಾ.ರಾಜ್ ಅವರಿಗೆ ಅತ್ಯಂತ ಹೆಚ್ಚು ಬಿರುದುಗಳು ದಕ್ಕಿವೆ. ಇದರೊಂದಿಗೆ ನಟನೆಗೆ ಹಾಗೂ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಇವರ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಹಾಗೂ 'ನಾದಮಯ' ಹಾಡಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇವಿಷ್ಟು ಮಾತ್ರವಲ್ಲದೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅಪರೂಪದ ನಟ ಅಂದರೆ ಅದು ಡಾ.ರಾಜ್ ಕುಮಾರ್ ಅವರು.

ಅಲ್ಲದೇ ಗೌರವ ಡಾಕ್ಟರೇಟ್ ಜೊತೆಗೆ 1985 ರಲ್ಲಿ ಯು.ಎಸ್ ನ ಕೆಟಂಕಿಯ ರಾಜ್ಯಪಾಲರಿಂದ 'ಕೆಟಂಕಿ ಕರ್ನಲ್' ಗೌರವಕ್ಕೆ ಪಾತ್ರರಾಗಿರುವ ಏಕೈಕ ನಟ ಎಂದರೆ ಅದು ಡಾ.ರಾಜ್ ಕುಮಾರ್ ಅವರು.