ನಾಡಿನೆಲ್ಲೆಡೆ ಸಂಭ್ರಮದ ಕನಕದಾಸ ಜಯಂತಿ

ನಾಡಿನೆಲ್ಲೆಡೆ ಸಂಭ್ರಮದ ಕನಕದಾಸ ಜಯಂತಿ

YK   ¦    Nov 15, 2019 10:05:11 AM (IST)
ನಾಡಿನೆಲ್ಲೆಡೆ ಸಂಭ್ರಮದ ಕನಕದಾಸ ಜಯಂತಿ

ಕನಕದಾಸ ಜಯಂತಿಯನ್ನು ಪ್ರತಿ ವರ್ಷ ನವೆಂಬರ್ 15ರಂದು ರಾಜಾದಾದ್ಯಂತ ಸಂಭ್ರಮದಿಂದ ಆಚರಿಸಾಗುತ್ತಿದೆ. ಕನಕದಾಸರು ಕುರುಬ ಸಮುದಾಯದಲ್ಲಿ ಹುಟ್ಟಿದರಿಂದ ರಾಜ್ಯದ ಕುರುಬ ಗೌಡ ಸಮುದಾಯದವರು ಕನಕದಾಸ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಜೀವನ:
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ನಾಯಕ ದಂಪತಿ ಮಗನಾಗಿ ಜನಿಸಿದರು. ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು.

ಅವರು ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದರು. ಕನದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.