ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

Gayatri Gowda   ¦    Nov 25, 2019 05:33:29 PM (IST)
ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

ಅಳಿವಿನಂಚಿರುವ ಹಳ್ಳಿಯ ಕಸುಬುಗಳನ್ನು ಉಳಿಸಿ ಬೆಳೆಸುವ ಸಂದೇಶವನ್ನು ಸಾರುತ್ತಾ, ಹಳ್ಳಿಯ ವಾತಾವರಣವನ್ನು ಸೃಷ್ಟಿಸಿದ ದೃಶ್ಯಕಂಡು ಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಸಿದ್ಧ ಪಡಿಸಿರುವ ವಸ್ತುಪ್ರದರ್ಶನದ ಮಳಿಗೆಯಲ್ಲಿ.

ಈ ಮಳಿಗೆಯಲ್ಲಿದ್ದ ಮಣ್ಣಿನ ದಿನೋಪಯೋಗಿ ವಸ್ತುಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಇದರ ರೂವಾರಿ ಕಾರ್ಯತಡ್ಕ ನಿವಾಸಿ ಸಂಜೀವ ಮತ್ತು ಕೇಶವ ಕುಂಬಾರ. ಈ ಹಿಂದೆ ಸುಮಾರು 15 ವರ್ಷದಿಂದ ಮೋಟಕುಂಬಾರ ಬರುತ್ತಿದ್ದರು. ಅವರು ಮರಣ ಹೊಂದಿದ್ದು, ಈ ವರ್ಷ ಅವರ ಮಕ್ಕಳು ಮುಂದುವರಿಸುತ್ತಿದ್ದಾರೆ. ಇವರು ಸ್ವಂತ ಉದ್ಯೋಗ ನಡೆಸುವುದರ ಮೂಲಕ ತಮ್ಮ ಜೀವನವನ್ನು ಸುಖಮಯವಾಗಿ ಕಳೆಯುತ್ತಿದ್ದಾರೆ.

ತಯಾರಿಸುವ ವಿಧಾನ:

ಕೊಪ್ಪ ಮಣ್ಣನ್ನು ಬೆಂಕಿಯಿಂದ ಸುಟ್ಟು ಹದ ಮಾಡಿ, ಬೇಯಿಸಿ ತಮಗೆ ಬೇಕಾದ ರೂಪ ಕೊಟ್ಟು ತಯಾರಿಸುತ್ತಾರೆ. ಕಟ್ಟಿಂಗ್ ಮಡಕೆ ಅಂದರೆ ಮಡಿಕೆಯ ಸುತ್ತಲೂ ಸುಂದರವಾದ ವಿನ್ಯಾಸದೊಂದಿಗೆ ತಯಾರಾಗುವ ಮಡಿಕೆಗಳು. ಒಂದು ದಿನಕ್ಕೆ ಇಂತಹ ಮೂರು ಮಡಿಕೆಗಳನ್ನು ತಯಾರಿಸುತ್ತಾರೆ. ಹಾಗೇ ಕಟ್ಟಿಂಗ್‌ ಇಲ್ಲದ ಆರು ಮಡಿಕೆಗಳನ್ನು ತಯಾರಿಸುತ್ತಾರೆ.

ದಿಡುಪೆಯಿಂದ ಕೊಪ್ಪ ಮಣ್ಣನ್ನುತಂದು  ಮನೆಯವರ ಸಹಕಾರದಿಂದ ಮಡಕೆ, ಹೂಜಿ, ತವ, ಲೋಬನ್, ಕುಂಭ ಹೀಗೆ ಸುಮಾರು ನಲವತ್ತೆರಡು ರೀತಿಯ ವಸ್ತುಗಳನ್ನು ಮಣ್ಣಿನಲ್ಲಿ ತಯಾರಿಸುತ್ತಿದ್ದಾರೆ. ಇತ್ತೀಚೆಗೆ ಸಕಾಲದಲ್ಲಿ ಮಡಿಕೆ ಮಾಡಲು ಮಣ್ಣು ಸಿಗದೆ ಸಮಸ್ಯೆಯುಂಟಾಗುತ್ತಿರುವುದು ಸುಳ್ಳಲ್ಲ.  ಮೊದಲೆಲ್ಲಾ ಜೇಡಿ ಮಣ್ಣಿನಿಂದ ಮಡಿಕೆಗಳನ್ನು ತಯಾರಿಸುತ್ತಿದ್ದರು. ಆದರೆ ಈಗ ಜೇಡಿ ಮಣ್ಣು ಸಿಗದಿರುವುದರಿಂದ ಕೊಪ್ಪ ಮಣ್ಣಿನಿಂದ ಮಡಿಕೆ ತಯಾರಿಸುತ್ತಾರೆ. ಇವರು ತಯಾರಿಸಿದ  ಮಡಿಕೆಯನ್ನುಯೋಜನೆಯ ಕೃಷಿ ಮೇಳಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಹತ್ತಿರದ ಸುತ್ತ ಮುತ್ತಲಿನ ಹಳ್ಳಿಗಳಲ್ಲೂ ಮಾರಾಟ ಮಾಡುತ್ತಾರೆ.

ಚಿತ್ರಗಳು: ಆದರ್ಶಕೆ.ಜಿ

More Images