"ನಮ್ಮ ದೇಶ... ನಮಗೆಷ್ಟು ಗೊತ್ತು ?"

"ನಮ್ಮ ದೇಶ... ನಮಗೆಷ್ಟು ಗೊತ್ತು ?"

NB   ¦    Aug 19, 2017 05:55:54 PM (IST)

ಅದೆಷ್ಟೋ ನಿಸ್ವಾರ್ಥ ಮನೋಭಾವನೆಯ, ಕೆಚ್ಚೆದೆಯ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಫಲವಾಗಿ ಅಂದು 1947 ಅಗಸ್ಟ್ 15 ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂತು. ಹೀಗೆ ಆಗಸ್ಟ್ ೧೫ ಭಾರತದ ರಾಷ್ಟೀಯ ರಜಾದಿನವಾಗಿದ್ದು, ಪ್ರತಿ ವರ್ಷ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯೆಂದು ಬಹಳ ಸಡಗರ, ಸಂಭ್ರಮ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಈ ದಿನ ಕೆಂಪುಕೋಟೆಯಲ್ಲಿ ನಮ್ಮ ದೇಶದ ಪ್ರಧಾನಿಗಳು ಧ್ವಜ ಹಾರಿಸಿ ದೇಶವನ್ನುದ್ಧೇಶಿಸಿ ಭಾಷಣ ಮಾಡುತ್ತಾರೆ. ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ಶಾಲೆಕಾಲೇಜುಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಿಹಿತಿಂಡಿ ವಿತರಣೆ ಕೂಡ ನಡೆಯುವುದರ ಜೊತೆಗೆ, ಬಂಧುಮಿತ್ರರು ಭೋಜನಕೂಟ ಮತ್ತು ಪ್ರವಾಸಗಳಿಗೆ ಹೊರಡುತ್ತಾರೆ. ಇನ್ನಿತರ ಸಂಘ-ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ, ಸ್ಪರ್ಧೆಗಳನ್ನೂ ಹಮ್ಮಿಕೊಳ್ಳುತ್ತದೆ.

ಈ ರೀತಿ ಪ್ರತಿವರ್ಷ ಆಚರಿಸುತ್ತೇವೆ ಆದರೆ ನಿಜವಾಗಿಯೂ ನಮ್ಮ ದೇಶದ ಜನರಿಗೆ ನಮ್ಮ ದೇಶದ ಬಗ್ಗೆ, ರಾಸ್ಟ್ರಗೀತೆ, ರಾಷ್ಟ್ರ ಧ್ವಜ ಸೇರಿದಂತೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದಿರುವುದು ಕೆಲವೇ ಕೆಲವು...ನಿಜವಾಗಿಯೂ ಇದು ನಮ್ಮ ದುರಂತ ಅಲ್ಲವೇ...?

ಹೌದು...ಈ ನಿಟ್ಟಿನಲ್ಲಿ ಈ ವಾರದ ವೀಕೆಂಡ್ ಸ್ಪೆಷಲ್ ವಿದ್ ಎನ್ ಕೆ ಟಿವಿ...ನಮ್ಮ ದೇಶ ನಮಗೆಷ್ಟು ಗೊತ್ತು ? ಅನ್ನುವ ಕಾರ್ಯಕ್ರಮವನ್ನು ಪ್ರಸಾರಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಜನರಿಗೆ ನಮ್ಮ ದೇಶ, ರಾಷ್ಟ್ರಗೀತೆ, ರಾಷ್ಟ್ರಧ್ವಜದಲ್ಲಿರುವ ಬಣ್ಣಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೀಗೆ ಜನರಿಗೆ ಪ್ರಶ್ನೆಗಳನ್ನು ಕೇಳಲಾಗಿದ್ದು ಪ್ರಶ್ನೆಗಳಿಗೆ ಜನರಿಂದ ಸಿಕ್ಕಂತಹ ಉತ್ತರ ಬಹುತೇಕ ಹಾಸ್ಯಾಸ್ಪದವಾಗಿದ್ದು, ನಮ್ಮ ದೇಶದ ಬಗ್ಗೆ ನಮ್ಮ ದೇಶದ ಪ್ರಜೆಗಳಿಗೆ ತಿಳಿಯದೇ ಇರುವುದು ವಿಪರ್ಯಾಸವೇ ಸರಿ...

ಈ ಎಪಿಸೋಡ್ ನೋಡುವಾಗ ಮಾತ್ರವಲ್ಲ 'ಪ್ರತಿ ವರ್ಷದ ಈ ತಿಂಗಳಿನಲ್ಲಿ ನನ್ನನ್ನು ಕಾಡುವ ಪ್ರಶ್ನೆ...ನಮಗೆ ನಿಜಕ್ಕೂ ಸ್ವಾತಂತ್ರ್ಯ ಬಂದಿದೆಯೆ?'... ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?” ಎಂದು ಕವಿಗಳು ಬಹಳ ಹಿಂದೆಯೇ ಕೇಳಿದ್ದರು. ಇದು ನಿಜವಾಗಿಯೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ...