24ಕೆಜಿ ಬ್ರಹತ್ ಗಾತ್ರದ ಕುಂಬಳ ಕಾಯಿ

24ಕೆಜಿ ಬ್ರಹತ್ ಗಾತ್ರದ ಕುಂಬಳ ಕಾಯಿ

Jul 31, 2017 07:44:37 PM (IST)
24ಕೆಜಿ ಬ್ರಹತ್ ಗಾತ್ರದ ಕುಂಬಳ ಕಾಯಿ

ಚೆಟ್ಟಳ್ಳಿ: ಚೆಟ್ಟಳ್ಳಿಯ ಈರಳೆವಳಮುಡಿ ಗ್ರಾಮದ ಬಲ್ಲಾರಂಡಕವನ್ನ್ತಿಮ್ಮಯ್ಯನವರತೋಟದಲ್ಲಿ ಸುಮಾರು 24ಕೆಜಿಯ ಬ್ರಹತ್ ಗಾತ್ರದ ಕುಂಬಳ ಕಾಯಿ ಬೆಳೆದು ಆಶ್ಚರ್ಯ ಮೂಡಿಸಿದ್ದಾರೆ.

ಕವನ್ನ್ಕಾರ್ಯಪ್ಪನವರ ತೋಟದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದವರು ಊರಿಂದ ಬರುವಾಗ ಸಿಹಿ ಕುಂಬಳ ಕಾಯಿಯ ಬೀಜ ಹಾಗು ಸೋರೆಕಾಯಿಯ ಬೀಜವನ್ನು ತಂದು ತೋಟದಲ್ಲಿ ಹಾಕಿ ಗಿಡವನ್ನು ಬೆಳೆಸಿದರಂತೆ, ಬಳ್ಳಿಗಳು ಬ್ರಹತ್ತಾಗಿ ಬೆಳೆದು ಹೂವಾಗಿ ಸುಮಾರು 30 ಕಾಯಿಗಳು ಬಿಟ್ಟಾಗ ಬೆಳೆದಂತೆ ಕುಯಿದು ಸಾರು ಮಾಡುತಿದ್ದರಂತೆ ಕೊನೆಯ ಮೂರು ಕುಂಬಳ ಕಾಯಿಗಳನ್ನು ಬೆಳೆಯಲು ಬಿಟ್ಟಾಗ ಅದರಲ್ಲಿ ಒಂದು ಬ್ರಹತ್ತಾಗಿ ಬೆಳೆದು ತೂಕ ಮಾಡಿದಾಗ ಸುಮಾರು 24 ಕೆಜಿಯಾಗಿತ್ತು. ಅದನ್ನು ಕುಟುಂಬದ ನೆರೆಯವರಿಗೆಲ್ಲ ಹಂಚಿದೆನೆಂದು ಕವನ್ ಹೇಳುತ್ತಾರೆ.