ಉಡುಪಿಯ ಶ್ರೀಕೃಷ್ಣನ "ವಿಟ್ಲ ಪಿಂಡಿ"ಯ ವೈಭವ...(ವೀಡಿಯೋ)

ಉಡುಪಿಯ ಶ್ರೀಕೃಷ್ಣನ "ವಿಟ್ಲ ಪಿಂಡಿ"ಯ ವೈಭವ...(ವೀಡಿಯೋ)

NB   ¦    Sep 24, 2017 07:29:56 PM (IST)
ಉಡುಪಿಯ ಶ್ರೀಕೃಷ್ಣನ "ವಿಟ್ಲ ಪಿಂಡಿ"ಯ ವೈಭವ...(ವೀಡಿಯೋ)

ವೀಡಿಯೋ... 

'ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಕೂಗಿದರೂ ಧ್ವನಿ ಕೇಳಲಿಲ್ಲವೇ ನರ ಹರಿಯೇ' ಎಂದು ಭಕ್ತ ಕನಕದಾಸರು ಶ್ರೀಕೃಷ್ಣನನ್ನು ಸತತವಾಗಿ ಸ್ತುತಿಸಿದಾಗ ಸ್ವತಃ ಶ್ರೀಕೃಷ್ಣ ತನ್ನ ಸ್ಥಾನವನ್ನು ಬದಲಿಸಿ ಪಡುಗಡಲ ಕಡೆ ತಿರುಗಿ ಭಕ್ತ ಕನಕದಾಸರಿಗೆ ದರ್ಶನವಿತ್ತ ಇತಿಹಾಸ ಪುರಾಣ ಪ್ರಸಿದ್ಧ ಉಡುಪಿ ಶ್ರೀಕೃಷ್ಣನ ಬಗ್ಗೆ ಹಾಗೂ ಬಗೆ ಬಗೆಯ ವೇಷ ಭೂಷಣಗಳ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಉಡುಪಿಯ ಶ್ರೀಕೃಷ್ಣನ ವಿಟ್ಲ ಪಿಂಡಿಯ ವೈಭವ ಈ ಬಾರಿಯ ವೀಕೆಂಡ್ ಸ್ಪೆಷಲ್ ಎನ್ ಕೆ ಟಿವಿ ಕಾರ್ಯಕ್ರಮದಲ್ಲಿ...

‘ವಿಟ್ಲಪಿಂಡಿ’, ಉಡುಪಿಯ ಹಾಗೂ ಅದರ ಆಸುಪಾಸಿನ ಜಿಲ್ಲೆಯ ಬಹುತೇಕ ಜನರಿಗೆ ಪರಿಚಿತ ಶಬ್ದ. ಶ್ರೀಕೃಷ್ಣ ಜನ್ಮಾಷ್ಠಮಿಯ ಮರುದಿನ ಉಡುಪಿಯ ರಥಬೀದಿಯಲ್ಲಿ ಆಚರಣೆಯಾಗುವ ಶ್ರೀಕೃಷ್ಣ ಲೀಲೋತ್ಸವ. ಕೃಷ್ಣ ಜನ್ಮಾಷ್ಟಮಿ ಮರುದಿನ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ವಿಟ್ಲಪಿಂಡಿ ಉತ್ಸವ ಆಚರಿಸಲಾಗುತ್ತದೆ.

ಶ್ರೀಕೃಷ್ಣ ಗೋಕುಲದಲ್ಲಿ ಜನಿಸಿದ ಸಮಯದಲ್ಲಿ ಆಚರಿಸಿದ ಸಂಭ್ರಮವೇ ಉಡುಪಿಯಲ್ಲಿ ಇಂದಿಗೂ ಆಚರಿಸಲಾಗುತ್ತಿರುವ ಕೃಷ್ಣ ಲೀಲೋತ್ಸವ ಅಥವಾ ವಿಟ್ಲ ಪಿಂಡಿ ಉತ್ಸವ ಎಂದು ಕರೆಯುತ್ತಾರೆ. ಉಡುಪಿಯ ಮತ್ತು ಪಕ್ಕದ ಜಿಲ್ಲೆಗೆ ಇದು ಸಡಗರ ಸಂಭ್ರಮದ ಹಬ್ಬವಾಗಿದೆ. ವಿಟ್ಲಪಿಂಡಿ ಅಂದರೆ ಅದೊಂದು ಬಣ್ಣ ಬಣ್ಣದ ವೇಷಗಳ ಜಾತ್ರೆ. ಒಂದು ಕಡೆ ಜನಸಾಗರ ಇನ್ನೊಂದೆಡೆ ಕೈಯಲ್ಲಿ ಕೊಳಲು ಹಿಡಿದು ಓಡಾಡುತ್ತಿರುವ ಕೃಷ್ಣ ವೇಷಧಾರಿ ಮಕ್ಕಳು, ಮತ್ತೊಂದೆಡೆ ಹುಲಿವೇಷಧಾರಿಗಳು ಜೊತೆಗೆ ಭಯಾನಕ ಶೈಲಿಯ, ವಿಭಿನ್ನ ರೂಪದ ಚಿತ್ರ ವಿಚಿತ್ರ ಶೈಲಿಯ ವಿವಿಧ ವೇಷಗಳು ಇದನ್ನು ನೋಡುವಾಗ ಇಡೀ ಊರಿಗೆ ಊರೇ ವೇಷ ಹಾಕಿದಂತೆ ಕಾಣುತ್ತದೆ.

ವಿಟ್ಲಪಿಂಡಿ ಎಂದಾಕ್ಷಣ ನೆನಪಾಗುವುದು 'ಹುಲಿ ವೇಷ'. ‘ಹುಲಿವೇಷ’ಗಳಿಲ್ಲದ ವಿಟ್ಲಪಿಂಡಿ ಅಪೂರ್ಣ. ಹಾಗಾಗಿ ರಥಬೀದಿಯ ಸುತ್ತ ನೂರಾರು ಹುಲಿವೇಷಧಾರಿಗಳ ಜೊತೆಗೆ ವೇಷ ಇಲ್ಲದಿದ್ದರೂ ‘ಹುಲಿವೇಷ’ದ ಸದ್ದಿಗೆ ನೃತ್ಯ ಮಾಡಿದ ಜನರ ಗುಂಪುಗಳು. ವಿಟ್ಲಪಿಂಡಿ ಮೆರವಣಿಗೆಯ ಇನ್ನೊಂದು ಪ್ರಮುಖ ಆಕರ್ಷಣೆ ಮುಖಕ್ಕೊಂದಿಷ್ಟು ಬಣ್ಣ ಬಳಿದುಕೊಂಡು ಜನಸಾಗರದ ನಡುವೆ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಓಡಾಡುತ್ತಿರುವ ಮಕ್ಕಳು ಮತ್ತು ಅವರಲ್ಲಿರುವ ಮುಗ್ದತೆ...ವಿಟ್ಲಪಿಂಡಿ ವಿಶೇಷವೆಂದರೆ ಹೊಸ ಹೊಸ ನಮೂನೆ ವೇಷಗಳು ಕೃಷ್ಣ ಬೇರೆ ಬೇರೆ ವೇಷದಲ್ಲಿ ಬರುತ್ತಾನೆ ಅನ್ನುವ ನಂಬಿಕೆ ಇದ್ದು, ನೂರಾರು ವೇಷಭೂಷಣಗಳು ನಗರದ ವಿವಿಧೆಡೆ ಕಂಡುಬಂತು. ಕೆಲವು ವೇಷಧಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ವೇಷ ಹಾಕಿದರೆ ಇನ್ನೂ ಕೆಲವರು ಅಶಕ್ತರಿಗೆ ನೆರವಾಗಲು ಬಗೆ ಬಗೆಯ ವೇಷಗಳನ್ನು ಹಾಕಿದ್ದು, ಇದು ಎಲ್ಲರ ಗಮನ ಸೆಳೆಯಿತು.

ಉಡುಪಿಯಲ್ಲಿ ನಡೆಯುವ ಮೊಸರು ಕುಡಿಕೆಗೆ ವಿಠಲನ ಪಿಂಡಿ ಎಂದು ಹೆಸರು. ಕೃಷ್ಣನ ರಥಬೀದಿಯಲ್ಲಿ ಜನಸಾಗರ ತುಂಬಿ ತುಳುಕುವ ನಡುವೆ ಎತ್ತರದ ಮರಗಳಿಗೆ ಕಟ್ಟಿದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವ ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ರಥಬೀದಿಯ ಚಿಕ್ಕ ಚಿಕ್ಕ ಮಂಟಪಗಳಲ್ಲಿ ಮೊಸರು ಕುಡಿಕೆ ಕಟ್ಟಲಾಗುತ್ತದೆ. ಕೃಷ್ಣನ ರಥಬೀದಿಯಲ್ಲಿ ಜನಸಾಗರ ತುಂಬಿ ತುಳುಕುವ ನಡುವೆ ಎತ್ತರದ ಮರಗಳಿಗೆ ಕಟ್ಟಿದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವ ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ರಥಬೀದಿಯಲ್ಲಿ ತುಂಬಿ ತುಳುಕುವ ಸಾವಿರಾರು ಜನರ ನಡುವೆ ಗೊಲ್ಲ ವೇಷಧಾರಿಗಳು ಎತ್ತರದ ಮರಗಳಿಗೆ ಕಟ್ಟಿದ ಮಡಕೆಗಳನ್ನು ಕೋಲಿನ ಸಹಾಯದಿಂದ ಒಡೆಯುವುದು ಪದ್ಧತಿ. ಒಡೆಯುವವರ ಕೋಲಿಗೆ ನಿಲುಕದಂತೆ ರಾಟೆಯ ಸಹಾಯದಿಂದ ಮಡಕೆಯನ್ನು ಮೇಲೆ ಕೆಳಗೆ ಆಡಿಸುವುದನ್ನ ನೋಡುವುದೇ ಚಂದ. ಕೊನೆಗೂ ಮಡಕೆಗೆ ಕೋಲು ತಾಗಿ ಮಡಕೆ ಒಡೆದು ಮೊಸರು ಹೊರಗೆ ಚಿಮ್ಮುವ ಆ ಕ್ಷಣ ನಿಜಕ್ಕೂ ಅದ್ಬುತ. ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಂದೊಂದೆ ಮಡಕೆಗಳನ್ನು ಒಡೆಯುತ್ತ ಹೋದಂತೆ ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ವಿಟ್ಲಪಿಂಡಿ ಇಡೀ ಜಗತ್ತಿನಾದ್ಯಂತ ಜನಪ್ರಿಯವಾಗಿದ್ದು, ಪ್ರಮುಖವಾಗಿ ಹೇಳ್ಬೇಕಾದರೆ ಚಿತ್ರ ವಿಚಿತ್ರ ವೇಷಭೂಷಣಕ್ಕೆ, ಅದರಲ್ಲೂ ಕೆಲವರು ಹೊಟ್ಟೆಪಾಡಿಗೋಸ್ಕರ ವೇಷ ಹಾಕಿದರೆ ಇನ್ನು ಕೆಲವರು ಚಾರಿಟಿಗೋಸ್ಕರ ಅಂದರೆ ಇತರರಿಗೆ, ರೋಗಿಗಳಿಗೆ, ಬಡವರಿಗೆ, ಅಥವಾ ಮಕ್ಕಳ ವಿದ್ಯಾಭ್ಯಾಸ ಹೇಗೆ ಇತರರ ಒಳಿತಿಗಾಗಿ ವೇಷ ಹಾಕಿದ ವೇಷಧಾರಿಗಳು ಈ ಪೈಕಿ ರವಿ ಕಟಪಾಡಿ ಅವರು ತನ್ನ ವಿಭಿನ್ನ ವೇಷದ ಮೂಲಕ 5,12745 ಹಣವನ್ನು ಸಂಗ್ರಹಿಸಿ ಅದನ್ನು ಅನಾರೋಗ್ಯಕ್ಕೀಡಾದ 7 ಮಂದಿ ಮಕ್ಕಳ ಚಿಕಿತ್ಸೆಗಾಗಿ ನೀಡಿರುವುದು ನಿಜಕ್ಕೂ ಅದ್ಬುತ...