ಪಕ್ಷಿಗಳಿಗೆ ಮಾರಕ ರೋಗ ಹಿನ್ನೆಲೆ: ರಂಗನತಿಟ್ಟುವಿನಲ್ಲೂ ಕಟ್ಟೆಚ್ಚರ

ಪಕ್ಷಿಗಳಿಗೆ ಮಾರಕ ರೋಗ ಹಿನ್ನೆಲೆ: ರಂಗನತಿಟ್ಟುವಿನಲ್ಲೂ ಕಟ್ಟೆಚ್ಚರ

Jan 05, 2017 01:19:22 PM (IST)

ಮೈಸೂರು: ಮೃಗಾಲಯದಲ್ಲಿನ ಪಕ್ಷಿಗಳಿಗೆ ಮಾರಕ ರೋಗ ತಗುಲಿದೆ ಎಂಬ ಕಾರಣಕ್ಕೆ ಮೃಗಾಲಯಕ್ಕೆ ಒಂದು ತಿಂಗಳು ರಜೆ ಘೋಷಣೆ ಮಾಡಿದ ಬೆನ್ನಲ್ಲೇ ರಂಗನತಿಟ್ಟು ಪಕ್ಷಿಧಾಮದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ರಂಗನತಿಟ್ಟು ಪಕ್ಷಿಗಳ ಚಲನವಲನಗಳ ಮೇಲೆ ನಿಗಾ ಇಡುವಂತೆ ಸ್ಥಳೀಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಪಕ್ಷಿಧಾಮದ ಪ್ರವೇಶ ದ್ವಾರದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಸಿದ್ಧತೆ ನಡೆದಿದ್ದು, ಈ ಟ್ಯಾಂಕ್ ನೀರಿನಲ್ಲೇ ಕಾಲು ತೊಳೆದು ಒಳಕ್ಕೆ ಬರುವ ವ್ಯವಸ್ಥೆ ಮಾಡಲಾಗುತ್ತಿದೆ.

ಪ್ರವಾಸಿಗರು ಬರುವಾಗ ಹೊರಗಿನಿಂದ ಊಟ, ತಿಂಡಿ ತಂದು ಸೇವಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪಕ್ಷಿಗಳ ಹಿಕ್ಕೆಗಳನ್ನು ಪ್ರತಿದಿನ ಸಂಗ್ರಹಿಸಲಾಗುತ್ತಿದ್ದು, ಇಂಡಿಯನ್ ಎನಿಮಲ್ ಹೆಲ್ತ್ ಆಂಡ್ ವೆಟರ್ನರಿ ಬಯಾಲಾಜಿಕಲ್'ಗೆ ಕಳುಹಿಸಿ ಕೊಡಲಾಗುತ್ತಿದೆ. ಒಟ್ಟಿನಲ್ಲಿ ಹಕ್ಕಿಜ್ವರ ಭೀತಿ ಎಲ್ಲೆಡೆ ಹರಡಿದ್ದು ಕಟ್ಟೆಚ್ಚರ ವಹಿಸಲಾಗುತ್ತಿದೆ.

 

More Images