ಸಮ್ಮಿಶ್ರ ಸರ್ಕಾರದಲ್ಲಿ ಸಾಮರಸ್ಯ ಬರಲು ಸಮಯಬೇಕು: ವೀರಪ್ಪ ಮೊಯ್ಲಿ

ಸಮ್ಮಿಶ್ರ ಸರ್ಕಾರದಲ್ಲಿ ಸಾಮರಸ್ಯ ಬರಲು ಸಮಯಬೇಕು: ವೀರಪ್ಪ ಮೊಯ್ಲಿ

MY   ¦    Jul 11, 2018 10:45:08 AM (IST)
ಸಮ್ಮಿಶ್ರ ಸರ್ಕಾರದಲ್ಲಿ ಸಾಮರಸ್ಯ ಬರಲು ಸಮಯಬೇಕು: ವೀರಪ್ಪ ಮೊಯ್ಲಿ

ಮೈಸೂರು: ಸಮಸ್ಯೆಗಳಿದ್ದೇ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದು. ರಾಜಕೀಯ ಕೌಶಲ್ಯತೆ, ಜಾಣ್ಮೆ ಮತ್ತು ಪರಿಣತಿಯಿಂದ ಸಮ್ಮಿಶ್ರ ಸರ್ಕಾರದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ವೀರಪ್ಪ ಮೊಯ್ಲಿ ಅವರಲ್ಲಿ, ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಕ್ಷೀಣಿಸುತ್ತಿದೆಯಾ ಎಂಬ ಮಾಧ್ಯಮಗಳಿಗೆ ಪ್ರಶ್ನೆಗೆ, ಸಮ್ಮಿಶ್ರ ಸರ್ಕಾರವನ್ನು ಸಮಸ್ಯೆಗಳಿದ್ದೇ ಮಾಡುವುದು. ಏಕೆಂದರೆ ಅದು ಒಂದು ಪಕ್ಷದ ಸರ್ಕಾರವಲ್ಲ. ಆ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಬಗ್ಗೆ ಹರಿಸಬೇಕು. ಅದು ಎರಡು ಪಕ್ಷದ ರಾಜಕೀಯ ಜಾಣ್ಮೆ ಮತ್ತು ಕೌಶಲ್ಯವನ್ನು ಹೊಂದಿಕೊಂಡಿರುತ್ತದೆ. ಅದಕ್ಕಾಗಿ ಎರಡು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಹೊಂದಾಣಿಕೆ ಮಾಡಿಕೊಂಡು 5 ವರ್ಷದಲ್ಲಿ ಸಾಧನೆಯನ್ನು ಮಾಡಬೇಕಾಗಿದೆ. ಎರಡು ಪಕ್ಷಗಳು ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನು ನೀಡಿದ್ದೇವೆ. ಅದೇ ರೀತಿ ಆರೋಪ ಪ್ರತ್ಯಾರೋಪವನ್ನು ಮಾಡಿದ್ದೇವೆ. ಹೀಗಿರುವಾಗ ಒಂದೆರೆಡು ತಿಂಗಳನಲ್ಲಿ ಹೊಂದಾಣಿಕೆ ಸರಿ ಹೋಗುತ್ತದೆ ಎಂಬುದನ್ನು ಹೇಳುವುದು ಸಾಧ್ಯವಿಲ್ಲ ಎಂದರು.

ಒಂದೇ ರೀತಿಯ ಸಾಮರಸ್ಯ ಬರುವುದಕ್ಕೆ ಸಮಯ ಬೇಕಾಗುತ್ತದೆ. ಈಗಾಗಲೇ ಲೋಕಸಭಾ ಚುನಾವಣೆಗೂ ಮೈತ್ರಿ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದೇವೆ. ಆದ್ದರಿಂದ ಸಮ್ಮಿಶ್ರ ಸರ್ಕಾರ ಮಂತ್ರಿಗಳ ಕೌಶಲ್ಯತೆ, ಜಾಣ್ಮೆ ಮತ್ತು ಪರಿಣತಿಯಿಂದ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಗೆ ಹೊಡೆತ ಬೀಳದಂತೆ ನಾವು ನೋಡಿಕೊಳ್ಳಬೇಕು. ನಮ್ಮ ಕಾಂಗ್ರೆಸ್ಸಿನ ಪ್ರತಿನಿಧಿಗಳು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರಿದ್ದಾರೆ. ನಮ್ಮ ಪಕ್ಷವನ್ನು ಕ್ಷೀಣಗೊಳಿಸುವುದಕ್ಕೆ ನಾವು ಬೀಡುವುದಿಲ್ಲ ಎಂದರು.