ಮೈಸೂರಿನಿಂದ ಕೊಚ್ಚಿ, ಗೋವಾಗೆ ಸದ್ಯದಲ್ಲೇ ವಿಮಾನಯಾನ ಆರಂಭ

ಮೈಸೂರಿನಿಂದ ಕೊಚ್ಚಿ, ಗೋವಾಗೆ ಸದ್ಯದಲ್ಲೇ ವಿಮಾನಯಾನ ಆರಂಭ

HSA   ¦    Jun 04, 2019 05:50:48 PM (IST)
ಮೈಸೂರಿನಿಂದ ಕೊಚ್ಚಿ, ಗೋವಾಗೆ ಸದ್ಯದಲ್ಲೇ ವಿಮಾನಯಾನ ಆರಂಭ

ಮೈಸೂರು: ಉಡಾನ್-3 ಯೋಜನೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ ಹಾಗೂ ಗೋವಾಕ್ಕೆ ಸದ್ಯದಲ್ಲೇ ವಿಮಾನಯಾನ ಆರಂಭವಾಗಲಿದೆ.

ಈ ತಿಂಗಳ ಅಂತ್ಯ ಹಾಗೂ ಜುಲೈ ಆರಂಭದಲ್ಲಿ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆಯು ಕಡಿಮೆ ದರಲ್ಲಿ ಈ ಸೇವೆ ಒದಗಿಸಲು ಮುಂದಾಗಿದೆ.

72 ಆಸನಗಳ ಏರ್ ಇಂಡಿಯಾ ವಿಮಾನವು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದೆ. ಈಗಾಗಲೇ ಚೆನ್ನೈ-ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.