ಹೊಂಡಾ ಆಕ್ಟೀವ ಕದಿಯುತ್ತಿದ್ದವನ ಬಂಧನ

ಹೊಂಡಾ ಆಕ್ಟೀವ ಕದಿಯುತ್ತಿದ್ದವನ ಬಂಧನ

LK   ¦    Aug 12, 2017 04:10:25 PM (IST)
ಹೊಂಡಾ ಆಕ್ಟೀವ ಕದಿಯುತ್ತಿದ್ದವನ ಬಂಧನ

ಮೈಸೂರು:ನಗರದಲ್ಲಿ ಹೊಂಡಾ ಆಕ್ಟೀವಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಪೊಲೀಸರು 1.40 ಲಕ್ಷ ರೂ. ಮೌಲ್ಯದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಹೆಬ್ಬಾಳ ಎರಡನೇ ಹಂತದ ನಿವಾಸಿ ಕೆ. ಸತೀಶ್(38) ಬಂಧಿತನಾಗಿದ್ದು, ಈತ ನಕಲಿ ಕೀ ಹಾಗೂ ದಬ್ಬಳವನ್ನು ಬಳಸಿ ಕಳ್ಳತನ ಮಾಡಿ ಬಳಿಕ ಆಟೋ ಕನ್ಸಲ್ಟೆಂಟ್ ಸೆಂಟರ್ಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ನಗರದ ಲಕ್ಷ್ಮೀಪುರಂ, ದೇವರಾಜ ಮತ್ತು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿ ಚಕ್ರ ವಾಹನಗಳು ಕಳ್ಳತನವಾಗಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದರು. ಈ ನಡುವೆ ಆರೋಪಿ ಸತೀಶ್ ಕದ್ದ ಮೂರು ಹೊಂಡಾ ಆಕ್ಟಿವವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದನು. ಅಲ್ಲದೆ ನಂಜುಮಳಿಗೆ ಬಳಿಯಿರುವ ಆಟೋ ಕಲ್ಸಲ್ಟೆಂಟ್ ಸೆಂಟರ್ನಲ್ಲಿ ವ್ಯವಹಾರ ಕುದುರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹಿನ್ನಲೆಯಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಳಿಕ ವಿಚಾರಣೆಗೊಳಪಡಿಸಿದಾಗ ಈತ ಹಲವೆಡೆ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಆತನ ಬಳಿಯಿಂದ 1,40,000 ರೂ ಮೌಲ್ಯದ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆ, ಕೃಷ್ಣರಾಜ ವಿಭಾಗದ ಎಸಿಪಿ ಧರ್ಮಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾಯರ್ಾಚರಣೆಯಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ನಿರೀಕ್ಷಕರಾದ ಜಿ.ಎಸ್ ರಘು, ಪಿಎಸ್ಐ ನಾಗಲಿಂಗು, ಎಎಸ್ಐ ಮರಿಸ್ವಾಮಿ ಸಿಬ್ಬಂದಿ ರಾಜು ಸಿ ಎಸ್, ಸಂಜಯ್, ಶಂಕರ್, ಸುದೀಪ್ ಕುಮಾರ್, ಮೋಹನ್ ಕುಮಾರ್, ಸ್ವಾಮಿ, ಸುರೇಶ್ ಅಂಬಿಗೇರೆ, ಎಂ.ಆರ್. ಕುಮಾರ ಪಾಲ್ಗೊಂಡಿದ್ದರು.