ಮೈಸೂರು ಅರ್ಬನ್ ಹಾತ್ ನಲ್ಲಿ ಕುಶಲಕರ್ಮಿಗಳ ಸಂಗಮ

ಮೈಸೂರು ಅರ್ಬನ್ ಹಾತ್ ನಲ್ಲಿ ಕುಶಲಕರ್ಮಿಗಳ ಸಂಗಮ

LK   ¦    May 15, 2019 03:40:37 PM (IST)
ಮೈಸೂರು ಅರ್ಬನ್ ಹಾತ್ ನಲ್ಲಿ ಕುಶಲಕರ್ಮಿಗಳ ಸಂಗಮ

ಮೈಸೂರು: ಜವಳಿ ಮಂತ್ರಾಲಯ (ಕರಕುಶಲ ಇಲಾಖೆ) ಭಾರತ ಸರ್ಕಾರದ ಸಹಯೋಗದೊಂದಿಗೆ ಕರಕುಶಲ ವಸ್ತುಪ್ರದರ್ಶನ ನಗರದ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಸುಮಾರು ಹತ್ತು ದಿನಗಳ ಕಾಲ ನಡೆಯುತ್ತಲಿದ್ದು, ಈ ಪ್ರದರ್ಶನದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕುಶಲ ಕರ್ಮಿಗಳು ತಮ್ಮ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ.

ಮೇ 17 ರಿಂದ ಆರಂಭವಾಗಿ 26ವರೆಗೆ ನಡೆಯಲಿರುವ ವಸ್ತುಪ್ರದರ್ಶನವು ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ನಡೆಯುತ್ತಿರುವ 104ನೇ ಮೇಳವಾಗಿರುತ್ತದೆ. ಈ ಮೇಳದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವ ದೇಶದ ನಾನಾ ಭಾಗಗಳಿಂದ ಸುಮಾರು 60 ಕ್ಕೂ ಹೆಚ್ಚಿನ ಕುಶಲಕರ್ಮಿಗಳು ತಮ್ಮ ತಮ್ಮ ರಾಜ್ಯಗಳ ವಿಭಿನ್ನ ಸಾಂಸ್ಕೃತಿಕ ಗರಿಮೆಯ ಕರಕುಶಲ ವಸ್ತುಗಳನ್ನು ಜನತೆಯ ಮುಂದೆ ತೆರೆದಿಡಲಿದ್ದಾರೆ.

ಕರ್ನಾಟಕ, ಜಮ್ಮು ಕಾಶ್ಮೀರ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕಾಶ್ಮೀರ, ದೆಹಲಿ, ಗುಜರಾತ್, ಒರಿಸ್ಸಾ, ಅಂಧ್ರ ಪ್ರದೇಶ, ತಮಿಳು ನಾಡು, ರಾಜಸ್ಥಾನ, ಬಿಹಾರ, ಸಹರಾನ್ಪುರ್, ಛತ್ತಿಸ್‍ಘರ್, ಮಧ್ಯಪ್ರದೇಶದ ಇನ್ನು ಕೆಲವು ರಾಜ್ಯಗಳ ಕರಕುಶಲ ವಸ್ತುಗಳನ್ನು ಮೇಳದಲ್ಲಿ ನೋಡಲು ಸಾಧ್ಯವಿದೆ.

ಇನ್ನು ಕರಕುಶಲ ವಸ್ತುಪ್ರದರ್ಶನಕ್ಕೊಂದು ಸುತ್ತು ಬಂದರೆ ಜಮ್ಮು ಕಾಶ್ಮೀರ ರಾಜ್ಯದ ಮೃದುವಾದ ಶಾಲು, ಖಶೀದಕರಿ ಎಂಬ್ರಾಯಿಡರಿ ಡ್ರೆಸ್‍ಗಳು ಮತ್ತು ಆಭರಣಗಳು ಒರಿಸ್ಸಾ ರಾಜ್ಯದ ದೊಗ್ರಾಶಿಲ್ಪ, ಪಟ್ಟ ಚಿತ್ರಕಲೆಗಳು, ಮಹಾರಾಷ್ಟ್ರ ರಾಜ್ಯದ ಟಸ್ಸರ್ ರೇಷ್ಮೆ ಸೀರೆಗಳು ಮತ್ತು ಕೊಲ್ಲಾಪುರ್ ಚಪ್ಪಲಿಗಳು, ದೆಹಲಿ ರಾಜ್ಯದ ಮಣ್ಣಿನಿಂದ ತಯಾರಿಸಿರುವ ಗೃಹಲಾಂಕಾರಿಕ ಹೂಜಿಗಳು, ಪೀಠೋಪಕರಣಗಳು, ಡ್ರೆಸ್‍ಗಳು ಗುಜರಾತ್ ರಾಜ್ಯ ಬಣ್ಣದ ಹೂಕುಂದಗಳು, ಕುಚ್ ವೂಲ್ಲನ್ ಶಾಲು ಮತ್ತು ಪ್ಯಾಚ್‍ವರ್ಕ್ ಬಿಹಾರದ ಮೈಥಿಲಿ ಚಿತ್ರಕಲೆಗಳು ಮತ್ತು ಮಧುಬನಿ ಚಿತ್ರಕಲೆ, ರತ್ನಗಂಬಳಿ, ಧರಿ, ಬುಡಕಟ್ಟು ಜನಾಂಗದ ಆಭರಣ, ಪಶ್ಚಿಮ ಬಂಗಾಳದ ಸೆಣಬಿನ ವಸ್ತುಗಳು, ಬಾಟಿಕ್ ಸೀರೆಗಳು, ಜದೋಷಿ ಸೀರೆಗಳು, ಕಾಂತ ಎಂಬ್ರಾಯಿಡರಿ ಸೀರೆಗಳು, ಟೆರೆಕೋಟಾ ಈಶಾನ್ಯ ರಾಜ್ಯಗಳ ಬಿದಿರಿನ ಗೃಹಪಯೋಗಿ ವಸ್ತುಗಳು ಮತ್ತು ಕೃತಕ ಹೂವುಗಳು, ಅರಗಿನ ಬಳೆಗಳು, ವರ್ಣಚಿತ್ರಗಳು, ಎಂಬ್ರಾಯಿಡರಿ, ಸಾಂಪ್ರದಾಯಿಕ ಗೊಂಬೆಗಳು ಮತ್ತು ಕೊಟಾ ಸೀರೆಗಳು ಗಮನಸೆಳೆಯುತ್ತವೆ.

ಇನ್ನು ಇಲ್ಲಿಯೇ ಛತ್ತಿಸ್‍ಘರ್ ರಾಜ್ಯದ ಸಾಂಪ್ರದಾಯಿಕ ಇಕ್‍ತ್ ಸೀರೆಗಳು ಮತ್ತು ಎಂಬ್ರಾಯಿಡರಿ ಹಾಗೂ ಬಸ್ತರ್ ಐರನ್ ಕ್ರಟ, ಆಂದ್ರ ಪ್ರದೇಶದ ಲೇಸ್, ಹೈದರಾಬಾದಿನ ಮುತ್ತಿನ ಆಭರಣಗಳು, ವೆಜಿಟೆಬಲ್ ಪ್ರಿಂಟ್ ಡ್ರೆಸ್‍ಮೆಟೀರಿಯಲ್‍ಗಳು ತಮಿಳುನಾಡಿನ ಮರದ ಕೆತ್ತನೆ, ಕೋರಾಗ್ರಾಸ್, ಕೈಮಗ್ಗ ವಸ್ತ್ರಗಳು, ಮಧ್ಯಪ್ರದೇಶದ ಚಂದೇರಿ ರೇಷ್ಮೆ ಸೀರೆಗಳು ಹಾಗು ಚರ್ಮದಿಂದ ತಯಾರಿಸಿರುವ ವಿವಿಧ ವಿನ್ಯಾಸದ ಪ್ರಾಣಿಗಳು, ಬಾಟಿಕ್ ಉಡುಗೆ -ತೊಡುಗೆಗಳು ಮತ್ತು ಕಂಚಿನ ವಿಗ್ರಹಗಳು, ನೆಲಹಾಸುಗಳು, ಫುಟ್ ಮ್ಯಾಟ್‍ಗಳು ಮತ್ತು ಚಿಕನ್ ಎಂಬ್ರಾಯಿಡರಿ ಜವಳಿ ವಸ್ತ್ರಗಳು ಮತ್ತು ಬೆಡ್‍ಶೀಟ್‍ಗಳು, ಕರ್ನಾಟಕದ ಕುಂದಣಕಲೆ, ರೇಶ್ಮೆ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು, ಮಣ್ಣಿನಿಂದ ತಯಾರಿಸಿದ ಹೂಜಿಗಳು, ಹೂ-ಕುಂದಗಳು, ವಸ್ತುಗಳು.. ಹೀಗೆ ಒಂದೇ ಎರಡೇ ನೂರಾರು ವಸ್ತುಗಳು ಆಕರ್ಷಿಸುತ್ತಿವೆ.

More Images