ಸಿಎಂ ಸಿದ್ದರಾಮಯ್ಯ ಬದಲು ಸಿದ್ದರಾಮಣಯ್ಯ ಎಂದು ಹೆಸರು ಬದಲಾಯಿಸಲಿ: ಪ್ರತಾಪ್ ಸಿಂಹ

ಸಿಎಂ ಸಿದ್ದರಾಮಯ್ಯ ಬದಲು ಸಿದ್ದರಾಮಣಯ್ಯ ಎಂದು ಹೆಸರು ಬದಲಾಯಿಸಲಿ: ಪ್ರತಾಪ್ ಸಿಂಹ

YK   ¦    Mar 11, 2018 04:28:03 PM (IST)
ಸಿಎಂ ಸಿದ್ದರಾಮಯ್ಯ ಬದಲು ಸಿದ್ದರಾಮಣಯ್ಯ ಎಂದು ಹೆಸರು ಬದಲಾಯಿಸಲಿ: ಪ್ರತಾಪ್ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಲ್ಲಿ ರಾವಣನ ಗುಣಗಳು ಹೆಚ್ಚಿರುವುದರಿಂದ ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಉತ್ತಮವಾಗಿರುತ್ತದೆ ಎಂದು ಟೀಕಿಸಿದ್ದಾರೆ.

ಕೇಂದ್ರದ ಮೋದಿ ಸರ್ಕಾರದ ಅನುಷ್ಠಾನ ಮಾಡಿದ ಕನಿಷ್ಠ 12-13 ಸಾವಿರ ಕೋಟಿ ರೂಪಾಯಿನ್ನು ನಾನೇ ತಂದಿದ್ದೇನೆ ಎಂದು ಹೇಳುತ್ತಾ ನಾನೇ ಮೈಸೂರು ಮಹಾರಾಜ ಎಂದು ಹೇಳುತ್ತಿದ್ದಾರೆ ಎಂದರು.