ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಕರೆ

ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಕರೆ

HSA   ¦    May 14, 2019 11:45:37 AM (IST)
ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಕರೆ

ಮೈಸೂರು: ಬಾಂಬ್ ಬೆದರಿಕೆ ಕರೆಯು ಬಂದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ತೀವ್ರ ಶೋಧ ನಡೆಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ಇದುವರೆಗೆ ಶೋಧಕಾರ್ಯದಲ್ಲಿ ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿಲ್ಲ. ಪೊಲೀಸರು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಮತ್ತು ಪ್ರವಾಸಿಗರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗುತ್ತಿದೆ.

ಮೊನ್ನೆ ಬೆಂಗಳೂರಿನಲ್ಲಿ ಕೂಡ ಉಗ್ರರು ದಾಳಿ ಮಾಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಇದನ್ನು ಪೊಲೀಸ್ ಕಮಿಷನರ್ ಅಲ್ಲಗಳೆದಿದ್ದರು.