ಯದುವಂಶಕ್ಕೆ ಯುವರಾಜನ ಆಗಮನ: ದೇವಸ್ಥಾನದಲ್ಲಿ ವಿಶೇಷ ಪೂಜೆ

ಯದುವಂಶಕ್ಕೆ ಯುವರಾಜನ ಆಗಮನ: ದೇವಸ್ಥಾನದಲ್ಲಿ ವಿಶೇಷ ಪೂಜೆ

MY   ¦    Dec 07, 2017 03:57:59 PM (IST)
ಯದುವಂಶಕ್ಕೆ ಯುವರಾಜನ ಆಗಮನ: ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: 64 ವರ್ಷಗಳ ನಂತರ ಮೈಸೂರಿನ ಯದುವಂಶಕ್ಕೆ ನೂತನ ಮಹಾರಾಜನ ಜನನವಾಗಿದ್ದು, ಅರಮನೆಯಲ್ಲಿ ಸಡಗರ ಮನೆ ಮಾಡಿದೆ.

ಮೈಸೂರು ಯದೂವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನಲ್ಲೆಯಲ್ಲಿ ಯದುವೀರ್ ನನ್ನ 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಯಿತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಲಾಗಿತ್ತು.

ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗು ಸುಮಾರು 9.50ರ ಸಮಯದಲ್ಲಿ ಪುನರ್ವಸು ನಕ್ಷತ್ರ ಹಾಗೂ ಮಿಥುನ ರಾಶಿಯಲ್ಲಿ ಜನನವಾಗಿದ್ದು ಈ ನಕ್ಷತ್ರದಲ್ಲಿ ಶ್ರೀರಾಮ ಚಂದ್ರ ಜನಿಸಿದ ನಕ್ಷತ್ರವಾಗಿದೆ.

ದೇವಸ್ಥಾನದಲ್ಲಿ ವಿಶೇಷ ಪೂಜೆ: ಯದುವಂಶಕ್ಕೆ ನೂತನ ವಾರುಸುದಾರ ಜನನವಾದ ಹಿನ್ನಲ್ಲೆಯಲ್ಲಿ ಶೃಂಗೇರಿಯ ಶಾರಾದ ಪೀಠದಲ್ಲಿ ವಿಶೇಷ ಪೂಜೆ ಹಾಗೂ ಮನೆದೇವರಾದ ಪರಕಾಲ ಸ್ವತಂತ್ರ ಮಂಠದಲ್ಲಿ ವಿಶೇಷ ಪೂಜೆ ನೇರವೇರಿಸಲಾಗಿದ್ದು, ಅರಮನೆಯೊಳಗಿನ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಮನೆದೇವರಾದ ಚಾಮುಂಡಿ ಬೆಟ್ಟದಲ್ಲೂ ಪೂಜೆ ನಡೆಯುತ್ತಿದೆ.

ಇನ್ನೂ ನೂತನ ಅತಿಥಿಯ ಆಗಮನದಿಂದ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಅರಸು ಮನೆತನದವರು ಅರಮನೆಗೆ ಆಗಮಿಸುವ ಜನರಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.

More Images