ಮೈಸೂರಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಾರ್ಥನೆ

ಮೈಸೂರಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಾರ್ಥನೆ

LK   ¦    May 22, 2019 05:20:00 PM (IST)
ಮೈಸೂರಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಾರ್ಥನೆ

ಮೈಸೂರು: ಡಿಟಿಎಸ್ ಫೌಂಡೇಶನ್ ವತಿಯಿಂದ ರಾಮಾನುಜ ರಸ್ತೆಯಲ್ಲಿರುವ ಕಾರ್ಯ ಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಅವರ ನೇತೃತ್ವದಲ್ಲಿ ನರೇಂದ್ರ ಮೋದಿಯವರ ಹೆಸರಿನಲ್ಲಿ ವಿಶೇಷಪೂಜೆಗಳನ್ನು ಮಾಡಿ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿ ಎಂದು ಪ್ರಾರ್ಥಿಸಲಾಯಿತು.

ಈ ವೇಳೆ ಮಾತನಾಡಿದ ಡಿ.ಟಿ.ಪ್ರಕಾಶ್ ಅವರು, ನರೇಂದ್ರ ಮೋದಿ ಅವರ 5 ವರ್ಷದ ಆಡಳಿತ ಜನ ಸಾಮಾನ್ಯರಿಗೆ ಅತ್ಯಂತ ತೃಪ್ತಿದಾಯಕವಾಗಿದ್ದು, ಮೋದಿ ಅವರು ಪ್ರಧಾನಮಂತ್ರಿಗಳಾಗಿ ಸುಭದ್ರ ಸರ್ಕಾರ ನೀಡಿ ದೇಶವನ್ನು ಮುನ್ನೆಡೆಸಿ ನಮ್ಮ ದೇಶವನ್ನು ವಿಶ್ವದಲ್ಲೇ ನಂ.1 ಆಗಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ ಅವರಿಗೆ 5 ವರ್ಷ ಸಾಕಾಗುವುದಿಲ್ಲ ಬದಲಾಗಿ ಮುಂದಿನ ಬಾರಿಯೂ ಪ್ರಧಾನಿಯಾಗಬೇಕು.

ಈಗಾಗಲೇ ಜನೌಷಧ, ಉಜ್ವಲ ಯೋಜನೆ, ಮುದ್ರಾಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ಷನ್ ಯೋಜನೆ, ಭೀಮಾ ಫಸಲ್, ಹೃದಯದ ಸ್ಟಂಟ್ ಕಡಿಮೆ ಬೆಲೆ ಇನ್ನೂ ಮುಂತಾದ ನೂರಾರು ಜನಕಲ್ಯಾಣ ಯೋಜನೆಗಳನ್ನು ಜನತೆಗೆ ನೀಡಿದ್ದಾರೆ. ಆದ್ದರಿಂದ ನಾವು ಅವರ ಮುಂದಾಳತ್ವವನ್ನು ಮೆಚ್ಚಿಕೊಂಡು ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ ಈ ಪೂಜೆಗಳನ್ನು ಮಾಡಿದ್ದಾಗಿ ಹೇಳಿದರು.

ಕಡಕೊಳ ಜಗದೀಶ್, ಜಯಸಿಂಹ ಶ್ರೀಧರ್, ಬಿಜೆಪಿಯ ಆನಂದ್,ಲೋಹಿತ್, ಗೈಡ್ ಚಂದ್ರು, ಕನ್ನಡ ಚಂದ್ರು, ಮೈ.ಲಾ.ವಿಜಯ ಕುಮಾರ್, ಅಪೂರ್ವ ಸುರೇಶ್, ಪ್ರಶಾಂತ ಭಾರದ್ವಾಜ್, ಚಕ್ರಪಾಣಿ, ಸುಚೀಂದ್ರ, ಕೌಂಡಿನ್ಯ, ಮುಂತಾದವರು ಭಾಗವಹಿಸಿದ್ದರು.