ನೋಟುಗಳಿಂದ ಶೃಂಗಾರಗೊಂಡ ಬಾಲ ತ್ರಿಪುರ ಸುಂದರಿ

ನೋಟುಗಳಿಂದ ಶೃಂಗಾರಗೊಂಡ ಬಾಲ ತ್ರಿಪುರ ಸುಂದರಿ

MY   ¦    Nov 07, 2018 04:03:35 PM (IST)
ನೋಟುಗಳಿಂದ ಶೃಂಗಾರಗೊಂಡ ಬಾಲ ತ್ರಿಪುರ ಸುಂದರಿ

ಮೈಸೂರು: ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ನೋಟುಗಳ ಅಲಂಕಾರ ಮಾಡಲಾಗಿದೆ.

2 ಸಾವಿರ, ಐನೂರು, ಇನ್ನೂರು, ನೂರು, ಐವತ್ತು, ಐದು ರೂಪಾಯಿ ಹೀಗೆ ವಿವಿಧ ಮುಖಬೆಲೆಯ ಒಟ್ಟು ಬರೊಬ್ಬರಿ ಎಂಟು ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ಮಾಡಿದ್ದ ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು.