ಗಂಡನ ಮನೆಯವರು ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

ಗಂಡನ ಮನೆಯವರು ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

Oct 12, 2017 04:44:41 PM (IST)
ಗಂಡನ ಮನೆಯವರು ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

ಮೈಸೂರು: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪವಿರುವ ಕಣೇನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಏನಿದು ಘಟನೆ: ಹೀಗೆ ಗಂಡನ ಮನೆಯವರ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ ರಾಣಿ (21). ಈಕೆ ಮೂರು ವರ್ಷಗಳ ಹಿಂದೆ ಕಣೇನೂರು ಗ್ರಾಮದ ಜಗದೀಶ ಎಂಬಾತನೊಂದಿಗೆ ವಿವಾಹವಾಗಿದ್ದು, ಈಕೆ ಮಂಗಳವಾರ ನೇಣಿಗೆ ಶರಣಾಗಿದ್ದು, ಮೃತ ರಾಣಿಗೆ ಒಂದು ವರ್ಷದ ಹೆಣ್ಣು ಮಗುವಿದೆ.

ಈಕೆ ನೇಣಿಗೆ ಶರಣಾಗಿ 2 ದಿನವಾದರೂ ಒಂದು ವರ್ಷದ ಹೆಣ್ಣು ಮಗುವಿಗೆ ಗಂಡನ ಮನೆಯ ಆಸ್ತಿ ನೀಡಬೇಕು ಹಾಗೂ ಚಿಕ್ಕ ಮಗುವಿಗೆ ಜೀವನಾಂಶ ನೀಡಬೇಕೆಂದು ರಾಣಿಯ ತವರು ಮನೆಯವರು ಮೃತ ದೇಹವನ್ನು ಗಂಡನ ಮನೆಯ ಮುಂದೆ ಇಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ. ಕೊನೆಗೆ ಗುರುವಾರ ಸಂಜೆ ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಆಗಮಿಸಿ ಇಬ್ಬರ ಮನೆಯವರನ್ನು ಮಾತುಕತೆಗೆ ಕರೆಸಿದ್ದಾರೆ. ಆದರೂ ಯಾವುದೇ ಮಾತುಕತೆ ಫಲ ನೀಡದ ಹಿನ್ನೆಲೆಯಲ್ಲಿ ಮೃತ ರಾಣಿಯ ತಾಯಿ ಹುಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.