ಬೆಟ್ ಕಟ್ಟಿ ನೀರಿಗೆ ಹಾರಿದ ಯುವಕ ನಾಪತ್ತೆ

ಬೆಟ್ ಕಟ್ಟಿ ನೀರಿಗೆ ಹಾರಿದ ಯುವಕ ನಾಪತ್ತೆ

MY   ¦    Jul 11, 2018 03:50:18 PM (IST)
ಬೆಟ್ ಕಟ್ಟಿ ನೀರಿಗೆ ಹಾರಿದ ಯುವಕ ನಾಪತ್ತೆ

ಮೈಸೂರು: ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಬೆಟ್ ಕಟ್ಟಿ ಈಜಲು ಹೋದ 5 ಜನರಲ್ಲಿ ಓರ್ವ ಯುವಕ ಕಾಣೆಯಾಗಿರುವ ಘಟನೆ ನಂಜನಗೂಡಿನ ಕಪಿಲಾ ನದಿಯಲ್ಲಿ ನಡೆದಿದೆ.

ಹೀಗೆ ಕಾಣೆಯಾದ ವ್ಯಕ್ತಿ ಮುಸಾಫೀರ್ ಶರೀಫ್(28) ಮರದ ವ್ಯಾಪಾರಿಯಾದ ಈತ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ರೈಲ್ವೆ ಸೇತುವೆ ಮೇಲಿಂದ ಬಾಜಿ ಕಟ್ಟಿ ನೀರಿಗೆ ಹಾರಿದ್ದಾರೆ. ಅದರಲ್ಲಿ ನಾಲ್ಕು ಜನ ದಡ ಸೇರಿದ್ದು ಮುಸಾಫೀರ್ ಶರೀಫ್ ನಾಪತ್ತೆಯಾಗಿದ್ದಾನೆ.

ಈತನ ಹುಡುಕಾಟವನ್ನು ರಕ್ಷಣಾ ಪಡೆಗಳು ಕೈಗೊಂಡಿದ್ದು, ತುಂಬಿ ಹರಿಯುತ್ತಿರುವ ನದಿಯಿಂದ ಈತನನ್ನ ಹುಡುಕಲು ಕಷ್ಟವಾಗಿದೆ. ಸ್ಥಳಕ್ಕೆ ನಂಜನಗೂಡು ಪೊಲೀಸರು ಆಗಮಿಸಿದ್ದಾರೆ.