ಚಾಮರಾಜನಗರದಲ್ಲಿ ಭೀಕರ ಅಪಘಾತ: ಮೂವರ ಸಾವು

ಚಾಮರಾಜನಗರದಲ್ಲಿ ಭೀಕರ ಅಪಘಾತ: ಮೂವರ ಸಾವು

LK   ¦    Apr 15, 2018 08:20:29 AM (IST)
ಚಾಮರಾಜನಗರದಲ್ಲಿ ಭೀಕರ ಅಪಘಾತ: ಮೂವರ ಸಾವು

ಚಾಮರಾಜನಗರ: ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶನಿವಾರ ನಡೆದಿದೆ.

ಬಿಜಾಪುರ ಮೂಲದವರಾದ ಸಂಕೇತ್, ಲಕ್ಷ್ಮಿಕಾಂತ ಮತ್ತು ಚಾಲಕ ಸಿದ್ದು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.

ಬಿಜಾಪುರ ಜಿಲ್ಲೆಯ ಹಿಂಡಿ ತಾಲೂಕಿನ ಕುಟುಂಬದ ಎಂಟು ಮಂದಿ ಶಿಫ್ಟ್ ಕಾರಿನಲ್ಲಿ ಕೇರಳ, ತಮಿಳುನಾಡು ಪ್ರವಾಸ ಮುಗಿಸಿಕೊಂಡು ಚಾಮರಾಜನಗರ ಮೂಲಕ ತಮ್ಮ ಊರಿಗೆ ಹಿಂತಿರುಗುವ ವೇಳೆ ರಾಷ್ಟ್ರೀಯ ಹೆದ್ದಾರಿ 209ರ ಸೋಮವಾರಪೇಟೆ ಕಾರನ್ನು ನಿಲ್ಲಿಸಿ ಬಿಸಿಲಿಗೆ ಎಳನೀರು ಕುಡಿಯಲು ಮುಂದಾಗಿದ್ದರು.

ಇದೇ ವೇಳೆಗೆ ಎದುರಿನಿಂದ ಬಂದ ಜೋಳ ತುಂಬಿದ ಲಾರಿಯು ಆಯತಪ್ಪಿ ರಸ್ತೆಯಲ್ಲಿ ನಿಂತಿದ್ದ ಶಿಷ್ಟ್ ಕಾರಿನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಸಿದ್ದು, ಬಾಲಕರಾದ ಸಂಕೇತ್, ಲಕ್ಷ್ಮಿಕಾಂತ ಸ್ಥಳದಲ್ಲೇ ಸಾವನ್ನಪ್ಪಿದರೆ, ಪ್ರೀತಿ ಮತ್ತು ಸಂಗಣ್ಣಗೌಡ ಎಂಬುವರು ತೀವ್ರ ಗಾಯಗೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ, ಗಾಯಾಳುಗಳನ್ನು ರಕ್ಷಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಕಾರಿನೊಳಗೆ ಚಾಲಕ ಸಿದ್ದು ಶವ ಸಿಲುಕಿದ್ದರಿಂದ ಜೆಸಿಬಿ ಮೂಲಕ ಕಾರನ್ನು ತುಂಡರಿಸಿ ಶವವನ್ನು ಹೊರ ತೆಗೆಯಲಾಗಿದೆ. ಹೆದ್ದಾರಿಯಲ್ಲಿ ಘಟನೆ ನಡೆದಿದ್ದರಿಂದಾಗಿ ಕೆಲ ಕಾಲ ಕರ್ನಾಟಕ-ತಮಿಳುನಾಡು ನಡುವೆ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದರು.

ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

More Images