ಎ.ಮಂಜು ಗೆಲುವಿಗೆ ಲಕ್ಷ ಬೆಲೆಯ ನಾಯಿ ಬೆಟ್ಟಿಂಗ್!

ಎ.ಮಂಜು ಗೆಲುವಿಗೆ ಲಕ್ಷ ಬೆಲೆಯ ನಾಯಿ ಬೆಟ್ಟಿಂಗ್!

LK   ¦    May 16, 2018 08:54:58 AM (IST)
ಎ.ಮಂಜು ಗೆಲುವಿಗೆ ಲಕ್ಷ ಬೆಲೆಯ ನಾಯಿ ಬೆಟ್ಟಿಂಗ್!

ಮಾಗಡಿ: ಮಾಗಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಗೆಲುವು ಕಂಡ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಕಟ್ಟಿದ ವ್ಯಕ್ತಿಯೊಬ್ಬರಿಗೆ 70 ಸಾವಿರ ಬೆಲೆ ಬಾಳುವ ಗ್ರೇಡ್ಡನ್ ನಾಯಿ ಒಲಿದು ಬಂದಿದೆ.

ಈ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ ತೆರೆಮರೆಯಲ್ಲಿ ನಡೆದಿದ್ದು, ಈಗ ಅತೀ ಹೆಚ್ಚು ಬಹುಮತದಿಂದ ವಿಜೇತರಾದ ಜೆಡಿಎಸ್ ನ ಎ.ಮಂಜು ಗೆಲ್ಲುತ್ತಿದ್ದಂತೆಯೇ ನಾಯಿ ಬೆಟ್ಟಿಂಗ್ ಕಟ್ಟಿದ್ದವನು ಕಳೆದುಕೊಂಡಿದ್ದರೆ, ಮತ್ತೊಬ್ಬನಿಗೆ ನಾಯಿ ದೊರೆಯುವಂತಾಗಿದೆ.

ಮಾಗಡಿಯ ಜಯ ಕರ್ನಾಟಕದ ಉಪಾಧ್ಯಕ್ಷ ಮಂಜುರವರು ಜೆಡಿಎಸ್ ಅಭ್ಯರ್ಥಿ ಎ.ಮಂಜುರವರು ಗೆಲ್ಲುತ್ತಾರೆಂದು ಸೆಂಡ್ ಬರ್ನಾಡ್ ಗ್ರೇಡ್ಡನ್ ತಳಿಯ ಒಂದುವರೆ ಲಕ್ಷ ರೂ. ಬೆಲೆ ಬಾಳುವ 2 ನಾಯಿಗಳನ್ನು ಪರಂಗಿ ಚಿಕ್ಕನಪಾಳ್ಯದ ಕಾಂಗ್ರೆಸ್ ನ ಮುಖಂಡನೊಬ್ಬನಿಗೆ 1 ಗ್ರೇಡ್ಡನ್ ಪಣವಾಗಿ ಕಟ್ಟಿದ್ದರು. ಎ.ಮಂಜುರವರು ಗೆಲ್ಲುತ್ತಿದ್ದಂತೆ 70 ಸಾವಿರ ಮೌಲ್ಯದ ಗ್ರೇಡ್ಡನ್ ನಾಯಿಯನ್ನು ಮಂಜುರವರು ಗೆದ್ದಿದ್ದಾರೆ. ಪಟ್ಟಣದ ಜೆಡಿಎಸ್ ಕಚೇರಿಗೆ ನಾಯಿಗಳನ್ನು ತರಲಾಗಿತ್ತು, ನಾಯಿಗಳ ಜೊತೆಯೇ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ 3 ನಾಯಿಗಳನ್ನು ಮನೆಗೆ ಕರೆದುಕೊಂಡು ಹೋದರು.

ಈ ಬಗ್ಗೆ ಮಾತನಾಡಿದ ನಾಯಿಯನ್ನು ಬೆಟ್ಟಿಂಗ್ ನಲ್ಲಿ ಗೆದ್ದ ಮಾಲೀಕರಾದ ಮಂಜುರವರು ಈ ಬಾರಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂದು ಪ್ರೀತಿಯಿಂದ ಸಾಕಿದ ಒಂದೂವರೆ ಲಕ್ಷ ರೂ. ಮೌಲ್ಯದ 2 ವಿವಿಧ ತಳಿಯ ನಾಯಿಗಳನ್ನು ಬೆಟ್ಟಿಂಗ್ ನಲ್ಲಿ ಕಟ್ಟಲಾಗಿತ್ತು, ಎ.ಮಂಜುರವರು ನಿರೀಕ್ಷೆಗೂ ಮೀರಿ 51 ಸಾವಿರ 425 ಮತಗಳಿಂದ ವಿಜೇತರಾಗಿದ್ದು ನನ್ನ ಮನೆಗೆ ಮತ್ತೊಬ್ಬ ಅತಿಥಿ ಬರುತ್ತಿದೆ, ನನಗೆ ಶ್ವಾನಗಳ ಮೇಲೆ ಸಾಕಷ್ಟು ಪ್ರೀತಿಯಿದ್ದು ಈಗ ಗೆದ್ದಿರುವ ನಾಯಿಯನ್ನು ಕೂಡ ಪ್ರೀತಿಯಿಂದ ಸಾಕುತ್ತೇನೆ ಎಂದಿದ್ದಾರೆ.