ಮೈಸೂರಲ್ಲಿ ಹಿಂದೂ ಮುಸಲ್ಮಾನರಿಂದ ಫ್ರೆಂಡ್ ಶಿಪ್ ಡೇ

ಮೈಸೂರಲ್ಲಿ ಹಿಂದೂ ಮುಸಲ್ಮಾನರಿಂದ ಫ್ರೆಂಡ್ ಶಿಪ್ ಡೇ

LK   ¦    Aug 03, 2019 04:09:38 PM (IST)
ಮೈಸೂರಲ್ಲಿ ಹಿಂದೂ ಮುಸಲ್ಮಾನರಿಂದ ಫ್ರೆಂಡ್ ಶಿಪ್ ಡೇ

ಮೈಸೂರು: ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ ಪರಿವರ್ತನಂ ಟ್ರಸ್ಟ್ ವತಿಯಿಂದ ನಗರದ ಚಾಮುಂಡಿಪುರಂ ವೃತ್ತದಲ್ಲಿ ಶಾಂತಿ ಸೌಹಾರ್ದತೆ ಸಮಾನತೆಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಿಂದೂ ಮುಸಲ್ಮಾನರು ಪರಸ್ಪರ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಪರಸ್ಪರ ಶುಭಕೋರಿ ಸೌಹಾರ್ದತೆಯ ಸಂದೇಶ ಸಾರಿದರು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿಯವರು ಪೌರಕಾರ್ಮಿಕ ಫ್ರೆಂಡ್‍ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸಮಾನೆಯ ಸಂದೇಶ ಸಾರಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಆಗಸ್ಟ್ ಮೊದಲ ಭಾನುವಾರ ವಿಶ್ವ ಸ್ನೇಹಿತರ ದಿನಾಚರಣೆಯನ್ನಾಗಿ ವಿಶ್ವದೆಲ್ಲಡೆ ಆಚರಿಸಲಾಗುತ್ತದೆ. ಆದರೆ ಪ್ರತಿ ವರ್ಷ ಪರಿವರ್ತನಂ ಟ್ರಸ್ಟ್ ವತಿಯಿಂದ ಸ್ನೇಹಿತರ ದಿನಾಚರಣೆಯನ್ನು ಒಂದು ದಿವಸದ ಮುನ್ನ ವಿಶಿಷ್ಟವಾಗಿ ಸಮಾಜಕ್ಕೇ ಸಂದೇಶ ನೀಡಲು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕಾರಣ ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ, ವಿದ್ಯಾಭ್ಯಾಸ, ವೃತ್ತಿಪರ ದಿನಗಳಲ್ಲಿ ಒಬ್ಬೊರಿಗೊಬ್ಬರು ಸ್ಪಂದಿಸಿರುತ್ತೇವೆ ಒಡನಾಟದಲ್ಲಿರುತ್ತೇವೆ ಉತ್ತಮ ಭಾಂದವ್ಯವಿರುತ್ತದೆ ಎಂಬುವುದು ಸಂಸ್ಥೆಯ ಸದುದ್ದೇಶವಾಗಿದೆ ಎಂದರು.

ಇಳೈ ಆಳ್ವಾರ್ ಸ್ವಾಮೀಜಿ ಅವರು ಮಾತನಾಡಿ, ಭಾರತದ ಇತಿಹಾಸದ ಪುಟ ನೋಡಿದರೂ ಕೃಷ್ಣ ಕುಚೇಲರ ಸಂಬಂಧ ಮತ್ತು ಅಮರ್ ಆಕ್ಬರ್ ಆಂಟೋನಿಯ ಅನ್ಯೋನ್ಯತೆಯನ್ನು ನಾವು ಕಾಣಬಹುದು. ಇಂದಿನ ರಾಜಕೀಯ ಕ್ಷೇತ್ರವನ್ನು ನೋಡಿದರೆ ಇಲ್ಲಿ ಯಾರು ಮಿತ್ರರಲ್ಲ ಯಾರೂ ಶತ್ರರಲ್ಲ ಎಂಬುದು ಕಂಡಿದ್ದೇವೆ, ನಾವು ಸಮಾಜದಲ್ಲಿ ಸ್ನೇಹ ಸಂಯಮ ಭಾವನೆಯೊಂದಿಗೆ ನಡೆದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಜನಸಂಪಾದನೆಯೂ ಗಳಿಸಬಹುದು ರಸ್ತೆಬದಿ ವ್ಯಾಪಾರಸ್ಥರಿಂದ ವಾಯುವಿಹಾರದವರೆಗೂ ಸ್ನೇಹ ಸಂಪರ್ಕವಿರಬೇಕು ಎಂದರು

ನಗರಪಾಲಿಕೆ ಸದಸ್ಯ ಮಾವಿ.ರಾಂಪ್ರಸಾಸ್, ವಿಕ್ರಂಅಯ್ಯಂಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಸೈಯದ್, ಸಾದಿಕ್, ಜಮೀರ್, ಪಾಷಾ, ಅಜ್ಮಲ್, ಹರೀಶ್ ನಾಯ್ಡು ರವಿತೇಜ, ಬಸವರಾಜು, ಮಧು ಪೂಜಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.