ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

LK   ¦    Sep 13, 2018 12:20:29 PM (IST)
ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಕೆ.ಆರ್.ಪೇಟೆ: ಶಿಕ್ಷಕನೊಬ್ಬ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆದಿಹಳ್ಳಿ-ಮಾಳಗೂರು ಬಸ್ ನಿಲ್ದಾಣದ ಸಮೀಪದ ನಡೆದಿದೆ.

ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ನಂಜೇಗೌಡ ಅವರ ಪುತ್ರ ಅಣ್ಣಪ್ಪ ಸ್ವಾಮಿ(36) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.

ಶಿಕ್ಷಕ ಅಣ್ಣಪ್ಪ ಸ್ವಾಮಿ ಅವರು ನಾಗಮಂಗಲ ತಾಲೂಕಿನ ಹೊನ್ನಾವರ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಪತ್ನಿ ಮಧುಕುಮಾರಿ ಶ್ರವಣಬೆಳಗೊಳ ಹೋಬಳಿಯ ಹೊಸಕೊಪ್ಪಲು ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗೆ 3 ವರ್ಷದ ಗಂಡು ಮಗುವಿದೆ. ಕಳೆದ ಐದು ವರ್ಷಗಳಿಂದ ಶ್ರವಣಬೆಳಗೊಳದಲ್ಲಿ ವಾಸಿಸುತ್ತಿದ್ದರು.

ಕಳೆದ ಮೂರು ದಿನಗಳ ಹಿಂದೆ ಹೊನ್ನಾವರಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಅಪ್ಪಣ್ಣ ಸ್ವಾಮಿ ವಾಪಸ್ಸಾಗಿರಲಿಲ್ಲ. ಆದರೆ ತಾಲೂಕಿನ ಆದಿಹಳ್ಳಿ ಸಮೀಪದ ಮಾಳಗೂರು ಗೇಟ್ ಬಳಿ ಜಮೀನೊಂದರ ಬಳಿ ತಮ್ಮ ಹೀರೋ ಹೊಂಡಾ ಬೈಕ್ ನಿಲ್ಲಿಸಿ ಆಲದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಈ ಸಂಬಂಧ ಮೃತ ಶಿಕ್ಷಕ ಅಣ್ಣಪ್ಪ ಸ್ವಾಮಿಯ ತಂದೆ ನಂಜೇಗೌಡ ಅವರು ದೂರು ನೀಡಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್. ಬಿ. ವೆಂಕಟೇಶಯ್ಯ ಮತ್ತು ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.