ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ: ಪ್ರತಾಪ್ ಸಿಂಹ

ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ: ಪ್ರತಾಪ್ ಸಿಂಹ

YK   ¦    Mar 11, 2018 07:02:12 PM (IST)
ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ: ಪ್ರತಾಪ್ ಸಿಂಹ

ಹುಣಸೂರು: ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು ಅವರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿಯಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. 

ಹುಣಸೂರು ಪಟ್ಟಣದ ಕಾಫಿ ವರ್ಕ್ಸ್ ನಲ್ಲಿ ಪಕ್ಷದ ವತಿಯಿಂದ ನಡೆದ ನವಶಕ್ತಿ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತರ ಮನಸ್ಥಿತಿಯೇ ಬೇರೆಯಾಗಿದ್ದು ಅವರನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ತ್ರಿಪುರದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿರಲಿಲ್ಲ್ಲ. ಕೇವಲ ಶೇ.2ರಿಂದ ಶೂನ್ಯ ಸ್ಥಾನ ಲಭಿಸಿತ್ತು. ಈಗ ಶೇ.43ರಷ್ಟು ಅಸ್ತಿತ್ವದಲ್ಲಿದೆ. ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗುತ್ತಾರೆ. ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಸಂಧ್ಯಾ ಸುರಕ್ಷಾ ಯೋಜನೆ, ಬಸವ ವಸತಿ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಸೈಕಲ್, ಸುವರ್ಣ ಗ್ರಾಮ, ಮುಂತಾದ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ.

40 ವರ್ಷ ಪಕ್ಷಕ್ಕಾಗಿ ದುಡಿದ ಅನುಭವ ಅವರಿಗಿದೆ. ನಾನು ಸಂಸದನಾದ ನಂತರ ಕೇಂದ್ರದಿಂದ ಮೈಸೂರಿನ ರಿಂಗ್ ರಸ್ತೆಯನ್ನು 150 ಕೋಟಿ ಹಣದಲ್ಲಿ ಅಭಿವೃದ್ಧಿ ಪಡಿಸಿದೆ. ಮೈಸೂರಿಂದ - ಕೊಡಗಿನ ರಸ್ತೆಗೆ 160 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಪಾಸ್ಫೋರ್ಟ್ ಕಚೇರಿಯನ್ನು ಮೈಸೂರಿನಲ್ಲಿ ಪ್ರಾರಂಭಿಸಿದ್ದಾಗಿ ಹೇಳಿದರು.