ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ - ಹೆಚ್.ವಿಶ್ವನಾಥ್ ಭೇಟಿ: ಹೆಚ್ಚಿದ ಕುತೂಹಲ

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ - ಹೆಚ್.ವಿಶ್ವನಾಥ್ ಭೇಟಿ: ಹೆಚ್ಚಿದ ಕುತೂಹಲ

MY   ¦    May 14, 2018 05:11:33 PM (IST)
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ - ಹೆಚ್.ವಿಶ್ವನಾಥ್ ಭೇಟಿ: ಹೆಚ್ಚಿದ ಕುತೂಹಲ

ಮೈಸೂರು: ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಮಾಜಿ ಸಂಸದ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿರುವುದು ಈಗ ಹಲವಾರು ಕೂತುಹಲಕ್ಕೆ ಕಾರಣವಾಗಿದೆ.

ಇಂದು ಹೆಚ್.ವಿಶ್ವನಾಥ್ ಅವರು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಜಯಲಕ್ಷ್ಮೀಪುರಂ ಮನೆಯಲ್ಲಿ ಬೆಳಗ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚುನಾವಣಾ ನಂತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಹಾಗೂ ನಿನ್ನೆ ಸಿಎಂ ಸಿದ್ದರಾಮಯ್ಯ  ದಲಿತ ಸಿಎಂ ಹೇಳಿಕೆಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲಿದೆ. ಅತಂತ್ರದ ಬಗ್ಗೆ ಈಗಲೇ ಯೋಚನೆ ಮಾಡುವುದು ಬೇಡ ಎಂದರು. ಇನ್ನೂ ಸಿಎಂ ಸಿದ್ದರಾಮಯ್ಯ ಎರಡು ಕಡೆ ಸೋಲುತ್ತಾರೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ನಂತರ ಮಾತನಾಡಿದ ಹೆಚ್.ವಿಶ್ವನಾಥ್, ಸಿಎಂ ಎರಡು ಕಡೆ ಗೆಲುತ್ತೇನೆ ಎಂಬ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯಾರು ಗೆಲ್ಲಬೇಕು ಎಂಬುದನ್ನು ಮತದಾರರು ತೀರ್ಮಾನ ಮಾಡುತ್ತಾರೆ. ಈ ಬಾರಿ ನಾನು ಹುಣಸೂರು ಕ್ಷೇತ್ರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.