ಡೆಂಗ್ಯೂ ಜ್ವರ ಹಿನ್ನಲೆ...ಪಾಲಿಕೆಯಿಂದ 65 ವಾರ್ಡ್ ಗೂ ಸೊಳ್ಳೆ ನಿಯಂತ್ರಣ ಫಾಗಿಂಗ್ ಮಿಷನ್ ವಿತರಣೆ

ಡೆಂಗ್ಯೂ ಜ್ವರ ಹಿನ್ನಲೆ...ಪಾಲಿಕೆಯಿಂದ 65 ವಾರ್ಡ್ ಗೂ ಸೊಳ್ಳೆ ನಿಯಂತ್ರಣ ಫಾಗಿಂಗ್ ಮಿಷನ್ ವಿತರಣೆ

Jun 17, 2017 03:34:49 PM (IST)

ಮೈಸೂರು: ನಗರದಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಜ್ವರ ಹೆಚ್ಚಾದ ಹಿನ್ನಲ್ಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ 65 ವಾರ್ಡ್ ಗಳಿಗೂ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಯಂತ್ರವನ್ನ ವಿತರಿಸಿದರು.

ಮೈಸೂರು ನಗರದಲ್ಲಿ ಕಳೆದ 2 ತಿಂಗಳಿನಿಂದ ನೂರಾರು ಮಕ್ಕಳು ಡೆಂಗ್ಯೂ ಹಾಗೂ ಮಲೇರಿಯಾ ಖಾಯಿಲೆಯಿಂದ ಬಳಲುತ್ತಿದ್ದು ಇದರ ನಿಯಂತ್ರಕ್ಕಾಗಿ ಜಿಲ್ಲಾ ಆರೋಗ್ಯ ಸಮಿತಿಯೂ ಮಹಾನಗರ ಪಾಲಿಕೆಗೆ ಸ್ವಚ್ಚತೆ ಕಾಪಾಡುವಂತೆ ಮನವಿ ಮಾಡಿತ್ತು.

ಈ ಹಿನ್ನಲ್ಲೆಯಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳಿಗೂ 65 ಸೊಳ್ಳೆ ನಿಯಂತ್ರಣ ಮಾಡುವ ಫಾಗಿಂಗ್ ಮಿಷನ್ ವಿತರಿಸಿತ್ತು. ಇಂದಿನಿಂದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ವಾಹನಗಳಲ್ಲಿ ಪ್ರತಿ ವಾರ್ಡ್ ಗೂ ಫಾಗಿಂಗ್ ಮಾಡುವ ಮೂಲಕ ಸ್ವಚ್ಚತೆ ಕಾಪಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.