ಮತ ಚಲಾಯಿಸದ ಕಾಂಗ್ರೆಸ್ ನಾಯಕಿ ರಮ್ಯಾ!

ಮತ ಚಲಾಯಿಸದ ಕಾಂಗ್ರೆಸ್ ನಾಯಕಿ ರಮ್ಯಾ!

HSA   ¦    May 12, 2018 07:49:06 PM (IST)
ಮತ ಚಲಾಯಿಸದ ಕಾಂಗ್ರೆಸ್ ನಾಯಕಿ ರಮ್ಯಾ!

ಮಂಡ್ಯ: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಖ್ಯಾತ ಚಿತ್ರ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಅವರು ಚುನಾವಣೆ ಮಾಡದೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದ್ದಾರೆ.

ರಮ್ಯಾ ಅವರು ಚುನಾವಣೆಯಲ್ಲಿ ಮತ ಚಲಾಯಿಸದೆ ಇರುವುದು ಈಗ ಭಾರೀ ಸುದ್ದಿ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮಂಡ್ಯದ ಜನರು ಹಿಂದೊಮ್ಮೆ ಇವರನ್ನು ಸಂಸದೆಯಾಗಿ ಆಯ್ಕೆ ಮಾಡಿದ್ದರೂ ಈಗ ಮತ ಚಲಾವಣೆ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಟಿ ರಮ್ಯಾ ಮಂಡ್ಯದ 10ನೇ ವಾರ್ಡ್ ನ ಮತದಾರೆಯಾಗಿದ್ದಾರೆ. ಆದರೆ ಇವರ ಮನೆಗೆ ಬೀಗ ಹಾಕಲಾಗಿತ್ತು. ರಮ್ಯಾ ಅವರು ಮತದಾನಕ್ಕೆ ಬರುತ್ತಾರೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.