ಮನೆ ಮೇಲಿದ್ದ ಬಾವುಟ ತೆರವು: ಮಾತಿನ ಚಕಮಕಿ

ಮನೆ ಮೇಲಿದ್ದ ಬಾವುಟ ತೆರವು: ಮಾತಿನ ಚಕಮಕಿ

HSA   ¦    Mar 13, 2019 03:43:38 PM (IST)
ಮನೆ ಮೇಲಿದ್ದ ಬಾವುಟ ತೆರವು: ಮಾತಿನ ಚಕಮಕಿ

ಮೈಸೂರು: ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಮನೆ ಮೇಲೆ ಅಳವಡಿಸಿದ್ದ ಬಾವುಟವನ್ನು ತೆರವುಗೊಳಿಸಲು ಚುನಾವಣಾ ಸಿಬ್ಬಂದಿಯು ಬಂದಾಗ ಇಬ್ಬರ ನಡುವೆ ಮಾತಿನ ಚಕಮಕಿಯು ನಡೆದಿದೆ.

ಬಿಜೆಪಿ ಕಾರ್ಯಕರ್ತರಾಗಿರುವ ಪ್ರಭುಸ್ವಾಮಿ ಎಂಬವರು ತ್ಯಾಗರಾಜ ರಸ್ತೆಯಲ್ಲಿ ತಮ್ಮ ಮನೆ ಮೇಲೆ ಬಿಜೆಪಿ ಬಾವುಟ ಅಳವಡಿಸಿದ್ದರು. ಇದನ್ನು ತೆರವು ಮಾಡಬೇಕೆಂದು ಬಂದ ಚುನಾವಣಾ ಸಿಬ್ಬಂದಿ ಹಾಗೂ ಕಾರ್ಯಕರ್ತರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಮನೆ ಮೇಲೆ ಯಾವುದೇ ಪಕ್ಷದ ಬಾವುಟ ಹಾಕಬಾರದು ಎಂದಿದ್ದರೆ ಆಗ ಚುನಾವಣಾ ಆಯೋಗವು ನೋಟಿಸ್ ನೀಡಲಿ. ಅದನ್ನು ಬಿಟ್ಟು ಏಕಾಏಕಿ ಬಂದು ಬಾವುಟ ತೆಗೆಯುವುದು ಸರಿಯಾದ ಕ್ರಮವಲ್ಲ ಎಂದು ಪ್ರಭುಸ್ವಾಮಿ ತಿಳಿಸಿದರು.