ಮಕ್ಕಳ ದಿನಾಚರಣೆ ಅಂಗವಾಗಿ ಯದುವೀರ್ ವಿದ್ಯಾರ್ಥಿಗಳೊಂದಿಗೆ ಸಂವಾದ

ಮಕ್ಕಳ ದಿನಾಚರಣೆ ಅಂಗವಾಗಿ ಯದುವೀರ್ ವಿದ್ಯಾರ್ಥಿಗಳೊಂದಿಗೆ ಸಂವಾದ

MH   ¦    Nov 14, 2017 09:39:21 PM (IST)
ಮಕ್ಕಳ ದಿನಾಚರಣೆ ಅಂಗವಾಗಿ ಯದುವೀರ್ ವಿದ್ಯಾರ್ಥಿಗಳೊಂದಿಗೆ ಸಂವಾದ

ಮೈಸೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳೊಂದಿಗೆ ರಾಜ ವಂಶಸ್ಥ ಯದುವೀರ್ ಸಂವಾದ ನಡೆಸಿ ಮಕ್ಕಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ಅರಮನೆ ಮುಂಭಾಗ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಳ್ಳುವ ಮೂಲಕ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡರು. 

ಇಂದು ಕಲಿಸು ಫೌಂಡೇಶನ್ ವತಿಯಿಂದ ಅರಮನೆ ಮಂಡಳಿಯ ಕಚೇರಿಯಲ್ಲಿ ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಯದುವೀರ್ ಸಂವಾದ ಕಾರ್ಯಕ್ರಮವನ್ನ ಏರ್ಪಡಿಸಿದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅರಮನೆ ಇತಿಹಾಸ, ರಾಜ ವಂಶಸ್ಥರ ಇತಿಹಾಸ, ರಾಜರು ಬೆಳೆದು ಬಂದ ದಾರಿಯ ಬಗ್ಗೆ ಯದುವೀರ್ ಅವರಿಗೆ ಪ್ರಶ್ನೆಗಳನ್ನ ಕೇಳಿದರು. ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ನೀಡಿದ ಯದುವೀರ್ ಕೆಲವು ಕಾಲ ಶಿಕ್ಷಕರಾಗಿ ಪಾಠ ಮಾಡಿದರು. ನಂತರ ಶಾಲಾ ಮಕ್ಕಳೊಂದಿಗೆ ಅರಮನೆ ಮುಂಭಾಗ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಖುಷಿ ಪಟ್ಟರು.  

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, ಮಕ್ಕಳ ಜೊತೆ ಸಂವಾದ ಮಾಡಿದ್ದು ತುಂಬಾ ಖುಷಿ ತಂದಿದೆ.
ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನನ್ನ ಶಾಲಾ ದಿನಗಳು ನೆನಪಿಗೆ ಬರುತ್ತಿದೆ. ನಾನು ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ತುಂಬಾ ಎಂಜಾಯ್ ಮಾಡುತ್ತಿದೆ ಎಂದು ತಮ್ಮ ಬಾಲ್ಯದ ಮಕ್ಕಳ ದಿನಾಚರಣೆಯನ್ನು ನೆನಪಿಸಿಕೊಂಡರು.