ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಅನಂತ್ ಕುಮಾರ್ ವಿರುದ್ದ ಎಫ್ ಐಆರ್ ದಾಖಲು

ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಅನಂತ್ ಕುಮಾರ್ ವಿರುದ್ದ ಎಫ್ ಐಆರ್ ದಾಖಲು

MY   ¦    Dec 07, 2017 04:10:19 PM (IST)
ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಅನಂತ್ ಕುಮಾರ್ ವಿರುದ್ದ ಎಫ್ ಐಆರ್ ದಾಖಲು

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ದ ಬೆಳಗಾವಿಯಲ್ಲಿ ಅವಹೇಳಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಅವಹೇಳನಕಾರಿಯಾಗಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿಜೆ ವಿಜಯಕುಮಾರ್ ಮೈಸೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ದೂರನ್ನ ಸ್ವೀಕರಿಸಿದ ನ್ಯಾಯಾಲಯವೂ ಕೇಂದ್ರ ಸಚಿವರ ವಿರುದ್ದ ದೂರು ದಾಖಲಿಸುವಂತೆ ಆದೇಶಿಸಿ ಮೈಸೂರಿನ ದೇವರಾಜ ಠಾಣೆಗೆ ಪ್ರಕರಣವನ್ನ ವರ್ಗಾಯಿಸಿದ್ದಾರೆ.

ಈ ಪ್ರಕರಣ ಬೆಳಗಾವಿಯ ಕಿತ್ತೂರಿನಲ್ಲಿ ನಡೆದಿರುವುದರಿಂದ ದೂರನ್ನ ಅಲ್ಲಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣೇಶ್ವರ್ ರಾವ್ ತಿಳಿಸಿದ್ದಾರೆ.