ರೇವಣ್ಣಗೆ ತಕ್ಕ ಉತ್ತರ ನೀಡಿದ ಸುಮಲತಾ

ರೇವಣ್ಣಗೆ ತಕ್ಕ ಉತ್ತರ ನೀಡಿದ ಸುಮಲತಾ

HSA   ¦    Mar 09, 2019 09:50:41 AM (IST)
ರೇವಣ್ಣಗೆ ತಕ್ಕ ಉತ್ತರ ನೀಡಿದ ಸುಮಲತಾ

ಮಂಡ್ಯ: ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಸುಮಲತಾ ವಿರುದ್ಧ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ತನ್ನ ವಿರುದ್ಧ ನೀಡಿರುವಂತಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ, ಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು, ಮಹಿಳೆಯರ ವಿರುದ್ಧ ಯಾರೂ ಹೀಗೆ ಮಾತನಾಡಬಾರದು. ಅವರ ಹೇಳಿಕೆಗೆ ಇನ್ನೇನೂ ಹೇಳುವುದಿಲ್ಲ ಎಂದರು.

ಪ್ರಚೋದನಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆಯದೇ ಮಾತುಗಳನ್ನು ಆಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಲ್ಲಿ ಅವರು ಸಫಲರಾಗುವುದಿಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ ಎಂದು ಸುಮಲತಾ ಹೇಳಿದರು.