ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಏಕಗವಾಕ್ಷಿ ಯೋಜನೆ ಜಾರಿ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಏಕಗವಾಕ್ಷಿ ಯೋಜನೆ ಜಾರಿ

MY   ¦    Dec 06, 2018 07:00:00 PM (IST)
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಏಕಗವಾಕ್ಷಿ ಯೋಜನೆ ಜಾರಿ

ಮೈಸೂರು: ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಶೀಘ್ರದಲ್ಲೇ ಅನ್ ಲೈನ್ ನಲ್ಲೆ ಅರ್ಜಿ ಸಲ್ಲಿಸುವ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.

ಕಟ್ಟಡಗಳ ನಕ್ಷೆ ಬಡಾವಣೆ ನಕ್ಷೆಗಳನ್ನು ಒಪ್ಪಿಗೆ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಈ ವ್ಯವಸ್ಥೆಯಲ್ಲಿ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಕಡ್ಡಾಯಗೊಳಿಸುವ ಚಿಂತನೆ ನಡೆಸಿದ್ದು ಇದರಿಂದ ಬ್ರೋಕರ್ ಗಳ ಹಾವಳಿಯನ್ನ ತಪ್ಪಿಸಬಹುದು ಎಂದರು.

ರಿಯಲ್ ಎಸ್ಟೇಟ್ ಗೆ ಪೆಟ್ಟು: ನೋಟು ರದ್ದತಿ, ಜಿಎಸ್ಟಿ, ರೇರಾ ಕಾಯ್ದೆಯಿಂದ ರಿಯಲ್ ಎಸ್ಟೇಟ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹಣದ ಹರಿವು ತಗ್ಗಿದೆ ಎಂದು ಕ್ರೆಡಾಯ್ ರಾಷ್ಟ್ರೀಯ ಮುಖ್ಯಸ್ಥ ಗೀತಾಂಬರ್ ಆನಂದ್ ಆತಂಕ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ‘ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ ಸ್ವಚ್ಛವಾದ ಗಾಳಿ, ಶುದ್ಧ ನೀರು ಜೊತೆಗೆ ವಾಸ್ತು ಪ್ರಕಾರ ನಗರ ನಿರ್ಮಾಣ ಮಾಡಬೇಕೆಂದು ಗುರೂಜಿ ಸಲಹೆ ನೀಡಿದರು.

More Images