ತನ್ನ ಗಾತ್ರಕ್ಕಿಂತ ದೊಡ್ಡದಾದ ಕಪ್ಪೆ ನುಂಗಿ ಒದ್ದಾಡಿದ ನಾಗರ ಹಾವು

ತನ್ನ ಗಾತ್ರಕ್ಕಿಂತ ದೊಡ್ಡದಾದ ಕಪ್ಪೆ ನುಂಗಿ ಒದ್ದಾಡಿದ ನಾಗರ ಹಾವು

MY   ¦    Nov 08, 2018 06:58:29 PM (IST)
ತನ್ನ ಗಾತ್ರಕ್ಕಿಂತ ದೊಡ್ಡದಾದ ಕಪ್ಪೆ ನುಂಗಿ ಒದ್ದಾಡಿದ ನಾಗರ ಹಾವು
ಮೈಸೂರು: ಕಪ್ಪೆ ನುಂಗಿ ಜೀರ್ಣಿಸಿಕೊಳ್ಳದೆ ಒದ್ದಾಡುತ್ತಿದ್ದ  ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಗುರುವಾರ ಮೈಸೂರಿನ ವಿಶ್ವವಿದ್ಯಾನಿಲಯ ಗಂಗೋತ್ರಿ ಬಡಾವಣೆಯಲ್ಲಿ ನಡೆದಿದೆ.
 
ಹಾವನ್ನು ಸ್ನೇಕ್ ರಮೇಶ್ ಅವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
 
ಮೈಸೂರು ವಿಶ್ವವಿದ್ಯಾನಿಲಯ ಗಂಗೋತ್ರಿ ಬಡಾವಣೆಯಲ್ಲಿ ಡಾ.ಮಾರುತಿ ಎಂಬುವವರ ಕಾಂಪೌಂಡ್ ಬಳಿ ದೊಡ್ಡ ಗಾತ್ರದ ಕಪ್ಪೆ ನುಂಗಿದ ನಾಗರಹಾವು ಅದನ್ನು ಜೀರ್ಣಿಸಿಕೊಳ್ಳದೇ ಒದ್ದಾಡುತ್ತ ಮನೆಯೊಳಗೆ ಬರುತ್ತಿದ್ದಾಗ ಇದನ್ನು ನೋಡಿ ಮನೆಯವರು ಗಾಬರಿಗೊಂಡಿದ್ದಾರೆ.
 
ತಕ್ಷಣ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿದಾಗ, ಸ್ಥಳಕ್ಕಾಗಮಿಸಿದ ಸ್ನೇಕ್ ರಮೇಶ್, ನಾಗರಹಾವಿನ ಬಾಯಿಂದ ಕಪ್ಪೆ ಹೊರತೆಗೆದಿದ್ದಾರೆ.
ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.