ಸಿದ್ದರಾಮಯ್ಯ ಅಹಂ ಮುರಿಯಲಾಗಿದೆ: ಎಚ್. ವಿಶ್ವನಾಥ್

ಸಿದ್ದರಾಮಯ್ಯ ಅಹಂ ಮುರಿಯಲಾಗಿದೆ: ಎಚ್. ವಿಶ್ವನಾಥ್

HSA   ¦    May 15, 2018 04:00:06 PM (IST)
ಸಿದ್ದರಾಮಯ್ಯ ಅಹಂ ಮುರಿಯಲಾಗಿದೆ: ಎಚ್. ವಿಶ್ವನಾಥ್

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿರುವುದು ಮಹಿಷಾಸುರ ಮರ್ಧನವಾದಂತೆ ಆಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಎಚ್. ವಿಶ್ವನಾಥ್ ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರಲ್ಲಿದ್ದ ಅಹಂಗೆ ಸರಿಯಾದ ಶಾಸ್ತಿಯಾಗಿದೆ. ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಹುಣಸೂರಿನಿಂದ ಗೆಲುವು ದಾಖಲಿಸಿದ ಎಚ್. ವಿಶ್ವನಾಥ್ ಅವರು ತನ್ನನ್ನು ಗೆಲ್ಲಿಸಿದ ಹುಣಸೂರಿನ ಜನತೆಗೆ ಧನ್ಯವಾದ ಸಲ್ಲಿಸಿದರು.