ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದವರು ಸಿಕ್ಕಿ ಬಿದ್ದರು!

ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದವರು ಸಿಕ್ಕಿ ಬಿದ್ದರು!

LK   ¦    Sep 13, 2018 04:03:33 PM (IST)
ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದವರು ಸಿಕ್ಕಿ ಬಿದ್ದರು!

ಮೈಸೂರು: ಮೋಜು ಮಸ್ತಿಗಾಗಿ ಬೈಕ್ ಕಳ್ಳತನ, ಜೇಬು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 8 ಲಕ್ಷ ರೂ. ಬೆಲೆ ಬಾಳುವ 15 ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನ ಇಲವಾಲದ ತೌಪಿಕ್(25), ಹೂಟಗಳ್ಳಿಯ ಬಾಲರಾಜ್ ಅಲಿಯಾಸ್ ಕುಂಡ(22), ಜಯಪುರ ಹೋಬಳಿಯ ಧನಗಳ್ಳಿಯ ವಿಜಯಕುಮಾರ್ ಅಲಿಯಾಸ್ ವಿಜಿ(22), ಬೋಗಾದಿಯ ಗುಣವರ್ಧನ್ ಅಲಿಯಾಸ್ ಗುಣ(20) ಎಂಬುವರೇ ಬಂಧಿತರು.

ಇವರು ಇದುವರೆಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ 1, ಮೈಸೂರು ನಗರದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ 1, ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ 1, ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ 1, ಬೆಂಗಳೂರಿನ ಚಾಮರಾಜ ಪೊಲೀಸ್ ಠಾಣೆಯಲ್ಲಿ 2, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 1 ರಾಮನಗರದ ಟೌನ್ ಪೊಲೀಸ್ ಠಾಣೆಯಲ್ಲಿ 1, ಐಜೂರು ಪೊಲೀಸ್ ಠಾಣೆಯಲ್ಲಿ 1 ಹೀಗೆ ಬೈಕ್ ಹಾಗೂ ಸ್ಕೂಟಿಗಳನ್ನು ಕಳ್ಳತನ ಮಾಡಿದ್ದು ಇನ್ನು 06 ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದೆ. ಇಷ್ಟೇ ಅಲ್ಲದೆ ಇದರೊಂದಿಗೆ ಬೆಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ 2 ಹಾಗೂ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ 2 ಜೇಬುಗಳ್ಳತನ ಪ್ರಕರಣಗಳಲ್ಲಿಯೂ ಇವರು ಭಾಗಿಯಾಗಿದ್ದರು.

ಮೈಸೂರು ಸೇರಿದಂತೆ ಬೇರೆ ಬೇರೆ ಕಡೆ ತೆರಳುತ್ತಿದ್ದ ಇವರು ಅಲ್ಲಿಂದ ಬೈಕ್‍ಗಳನ್ನು ಕಳ್ಳತನ ಮಾಡಿಕೊಂಡು ಬಂದು ಬಳಿಕ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಮೇಲಿಂದ ಮೇಲೆ ಬೈಕ್‍ಗಳ ಕಳ್ಳತನ ನಡೆಯುತ್ತಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪೊಲೀಸರು ವಾಹನ ಕಳ್ಳರ ಮೇಲೆ ನಿಗಾವಹಿಸಿದ್ದರು.

ಈ ನಡುವೆ ಆರೋಪಿಗಳು ಮೈಸೂರು ನಗರದ ನಗರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದರು. ಹೀಗಾಗಿ ಅವರ ಮೇಲೆ ಅನುಮಾನ ಸಹಜವಾಗಿಯೇ ಬಂದಿತ್ತು. ತಕ್ಷಣ ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ. ಅಮಟೆ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಬಿ.ಆರ್. ಲಿಂಗಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪಿಐ ಪ್ರಸನ್ನಕುಮಾರ್, ಆರ್.ಜಗದೀಶ್, ಎ.ಎಸ್.ಐ ರಾಜು, ಚಂದ್ರೇಗೌಡ, ನಾಗೂಬಾಯಿ.ಆರ್. ಸಿಬ್ಬಂದಿಗಳಾದ ರಾಜೇಂದ್ರ, ಅಸ್ಗರ್‍ ಖಾನ್, ರಾಮಸ್ವಾಮಿ, ಚಿಕ್ಕಣ್ಣ, ಯಾಕೂಬ್ ಷರೀಪ್, ಗಣೇಶ್.ಎಂ.ಆರ್., ಲಕ್ಷ್ಮಿಕಾಂತ್, ಶಿವರಾಜು, ಶ್ರೀನಿವಾಸಪ್ರಸಾದ್, ಅರುಣ್‍ಕುಮಾರ್, ಪುರುಷೋತ್ತಮ್, ನಿರಂಜನ್, ಪ್ರಕಾಶ್, ಆನಂದ್, ಅನಿಲ್, ರಘು, ನರಸಿಂಗ್‍ರಾವ್, ನಾಗೇಶ.ಎನ್.ಎಮ್. ಚಾಮುಂಡಮ್ಮ, ರಾಜಶ್ರೀ ಜಾಲವಾದಿ, ಧನಂಜಯ, ಶ್ರೀನಿವಾಸ್, ಶಿವಕುಮಾರ್ ಮೊದಲಾದವರು ಕಾಯಾಚರಣೆ ನಡೆಸಿ ಅವರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮೈಸೂರು, ಮಂಡ್ಯ, ಬೆಂಗಳೂರು ರಾಮನಗರಗಳಲ್ಲಿ ದ್ವಿಚಕ್ರ ವಾಹನಗಳನ್ನು ಹಾಗೂ ಜೇಬುಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.