ಕೊಕ್ಕರೆ ಬೆಳ್ಳೂರಲ್ಲಿ ಪೆಲಿಕಾನ್ ಪಕ್ಷಿಗಳ ಸಾವು

ಕೊಕ್ಕರೆ ಬೆಳ್ಳೂರಲ್ಲಿ ಪೆಲಿಕಾನ್ ಪಕ್ಷಿಗಳ ಸಾವು

LK   ¦    Dec 06, 2017 07:10:06 PM (IST)
ಕೊಕ್ಕರೆ ಬೆಳ್ಳೂರಲ್ಲಿ ಪೆಲಿಕಾನ್ ಪಕ್ಷಿಗಳ ಸಾವು

ಭಾರತೀನಗರ: ಪ್ರಸಿದ್ಧ ಪಕ್ಷಿ ತಾಣವಾದ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಆಗಮಿಸಿರುವ ವಿದೇಶಿ ಹಕ್ಕಿಗಳು ಅಸ್ವಸ್ಥಗೊಂಡು ಮೃತಪಡುತ್ತಿರುವುದು ಕಂಡು ಬಂದಿದೆ.

ಹಕ್ಕಿಗಳು ಸಾಯುವುದನ್ನು ನೋಡಿದ ಗ್ರಾಮಸ್ಥರು ಪಶು ಇಲಾಖೆಯ ವೈದ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿದೇಶದಿಂದ ಆಗಮಿಸಿರುವ ಪೆಲಿಕಾನ್ ಹಕ್ಕಿಗಳು ಅಸ್ವಸ್ಥಗೊಳ್ಳುತ್ತಿದ್ದು, ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದೇರೀತಿ ಕಳೆದ ಜನವರಿ ತಿಂಗಳಿನಲ್ಲೂ ಪೆಲಿಕಾನ್ ಹಕ್ಕಿಗಳು ಮೃತಪಟ್ಟಿದ್ದವು.

ಆ ದಿನಗಳಲ್ಲಿ ಎಚ್1ಎನ್1 ಸೋಂಕಿನಿಂದಾಗಿ ಮೈಸೂರು ಮೃಗಾಲಯದಲ್ಲಿ ಕೆಲವು ಹಕ್ಕಿಗಳು ಸಾವನ್ನಪ್ಪಿದ್ದ  ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ವನ್ಯಜೀವಿ, ಅರಣ್ಯ ಮತ್ತು ಪಶುವೈದ್ಯ ಇಲಾಖೆ ಅಧಿಕಾರಿಗಳು ಕೊಕ್ಕರೆಬೆಳ್ಳೂರಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಭೇಟಿ ನೀಡಿದ್ದರು.

ಎಚ್1ಎನ್1 ಸೋಂಕಿನಿಂದ ಮೃತಪಟ್ಟಿರಬಹುದೆಂದು ಶಂಕಿಸಿ ಹಕ್ಕಿಗಳ ಇಕ್ಕೆ ಸಂಗ್ರಹಿಸಿ ಸಂಶೋಧನೆಗೆ ಕಳುಹಿಸಿದ್ದರು. ಆಗ ಹಕ್ಕಿಗಳು ಜ್ವರದಿಂದ ಸಾವನ್ನಪ್ಪಿಲ್ಲ, ಸೋಂಕು ತಗುಲಿ ಸಾವನ್ನಪಿತ್ತು ಎಂದು ವನ್ಯಜೀವಿ ಪ್ರಯೋಗಾಲಯ ವರದಿ ನೀಡಿತು. ಆದರೆ, ಈಗಲೂ ಹಕ್ಕಿಗಳು ಅಸ್ವಸ್ಥಗೊಂಡು ಆಹಾರ ಸೇವಿಸಿರುವುದರಿಂದ ಪಕ್ಷಿ ಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ.