ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ

ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ

MY   ¦    Jan 11, 2019 04:41:19 PM (IST)
ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ

ಮೈಸೂರು: ಮಲ್ಪೆಯಲ್ಲಿ ನಾಪತ್ತೆಯಾಗಿರುವ ಏಳು ಜನ ಮೀನುಗಾರರನ್ನು ಪತ್ತೆ ಮಾಡಿಕೊಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸತೀಶ್, ಹರೀಶ್, ರಮೇಶ್, ದಾಮೋದರ್, ಚಂದ್ರಶೇಖರ್, ರವಿ, ಲಕ್ಷ್ಮಣ್ ಎಂಬವರು ಬೋಟ್ ನೋಂದಣಿ ಸಂಖ್ಯೆ IND-KA-02MM4632 ಸಂಖ್ಯೆಯ ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. ಇಂದಿಗೆ ಅವರು ನಾಪತ್ತೆಯಾಗಿ 26 ದಿನವಾದರೂ ಯಾವುದೇ ಸುಳಿವಿಲ್ಲ. ಇದು ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲ ಮೀನುಗಾರಿಕೆ ಮಾಡುವವರಿಗೆ ಚಿಂತೆಗೀಡುಮಾಡಿದೆ. ಅವರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದೇವೆ ಎಂದರು.