ಕುಡಿದು ಬಂದ ಮಗನನ್ನು ಕೊಂದು ಹೊಸ ಕಥೆ ಕಟ್ಟಿದ ಪೋಷಕರು…..

ಕುಡಿದು ಬಂದ ಮಗನನ್ನು ಕೊಂದು ಹೊಸ ಕಥೆ ಕಟ್ಟಿದ ಪೋಷಕರು…..

Oct 12, 2017 03:52:36 PM (IST)
ಕುಡಿದು ಬಂದ ಮಗನನ್ನು ಕೊಂದು ಹೊಸ ಕಥೆ ಕಟ್ಟಿದ ಪೋಷಕರು…..

ಮೈಸೂರು: ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನೇ ತಂದೆ ತಾಯಿಗಳು ಹೊಡೆದು ಕೊಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಸಲಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಹೀಗೆ ತಂದೆ ತಾಯಿಯಿಂದ ಕೊಲೆಯಾದ ಮಗ ವೆಂಕಟೇಶ್(30). ಈತ ಕಂಪಲಾಪುರದ ತಂಬಾಕು ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಕುಡಿದು ಬಂದು ತಂದೆ ತಾಯಿಯೊಂದಿಗೆ ಜಗಳ ಮಾಡಿ ತಂದೆ ತಾಯಿಯ ಮೇಲೆ ಹಲ್ಲೆಗೆ ಮುಂದಾಗಿದ್ದು ಈ ಸಂದರ್ಭದಲ್ಲಿ ತಂದೆ ತಾಯಿ ಈತನ ಮೇಲೆ ಹಲ್ಲೆ ನಡೆಸಿದ್ದು, ಮನೆಯಲ್ಲಿ ಸಾವ್ನಪ್ಪಿದ್ದಾನೆ.

ತಕ್ಷಣ ಈತನನ್ನು ಮನೆ ಹಿಂಭಾಗದಲ್ಲಿ ಎಸೆದಿದ್ದು ಬೆಳಗ್ಗೆ ಕಸ ಸುರಿಯಲು ಹೋದಾಗ ಮಗ ಸತ್ತು ಬಿದಿದ್ದಾನೆ ಎಂದು ತಂದೆ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಸಂಬಂಧ ಅನುಮಾನಗೊಂಡ ಪೊಲೀಸರು ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ನಡೆದ ವಿಚಾರ ಬೆಳಕಿಗೆ ಬಂದಿದೆ.


ಈ ಸಂಬಂಧ ತಂದೆ ತಾಯಿಗಳನ್ನ ವಶಕ್ಕೆ ಪಡೆದಿರುವ ಪಿರಿಯಾಪಟ್ಟಣ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

More Images