ತೀರ್ಪಿನ ದಿನವೇ ನಾಲ್ಕು ಬಾರಿ ಗೈರಾದ ಅತ್ಯಾಚಾರಿ ಆರೋಪಿ

ತೀರ್ಪಿನ ದಿನವೇ ನಾಲ್ಕು ಬಾರಿ ಗೈರಾದ ಅತ್ಯಾಚಾರಿ ಆರೋಪಿ

MY   ¦    Dec 07, 2017 06:11:43 PM (IST)
ತೀರ್ಪಿನ ದಿನವೇ ನಾಲ್ಕು ಬಾರಿ ಗೈರಾದ ಅತ್ಯಾಚಾರಿ ಆರೋಪಿ

ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ನೀಡುವ ದಿನದಂದೇ ಆರೋಪಿ ಕೋರ್ಟ್ ಗೆ ಗೈರಾಗುತ್ತಿರುವ ವಿಚಿತ್ರ ಘಟನೆಯೊಂದು ಮೈಸೂರಿನ ನ್ಯಾಯಾಲಯದಲ್ಲಿ ನಡೆದಿದೆ.

ಏನಿದು ಪ್ರಕರಣ: ಮೈಸೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಹಿಂದೆ ಶ್ರೀರಾಮುಲು ಸ್ಥಾಪಿಸಿದ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷನಾಗಿದ ಕೆ.ಜಿ ಮಹೇಶ್ ಗೌಡ ಎಂಬಾತನೇ ಆರೋಪಿಯಾಗಿದ್ದು, ಈತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಆ ಬಾಲಕಿಗೆ ಗರ್ಭೀಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆ ಮಗು ನನ್ನದಲ್ಲ ಎಂದು ವಾದಿಸುತ್ತಿದ್ದು. ಈ ಹಿನ್ನಲ್ಲೆಯಲ್ಲಿ ನ್ಯಾಯಾಲಯವೂ ಈ ಸಂಬಂಧ ಡಿಎನ್ ಎ ಪರೀಕ್ಷೆ ನಡೆಸಲು ಸೂಚಿಸಿತ್ತು.

ಡಿಎನ್ ಎ ಪರೀಕ್ಷೆಯಲ್ಲಿ ಈತ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವುದು ದೃಡ ಪಟ್ಟಿದೆ. ಈ ಸಂಬಂಧ ಮೈಸೂರಿನ 6ನೇ ಎಡಿಜೆ ಕೋರ್ಟ್ ಆರೋಪಿಯನ್ನ ನ್ಯಾಯಲಯಕ್ಕೆ ಹಾಜರು ಪಡಿಸುವಂತೆ ಪೊಲೀಸರಿಗೆ ನವೆಂಬರ್ 23 ರಂದು ತಿಳಿಸಿತ್ತು. ಆದರೆ ಆರೋಪಿ ಅನಾರೋಗ್ಯ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದ.

ನಂತರ ನವೆಂಬರ್ 29ರಂದು ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ತಿಳಿಸಿತ್ತು. ಆದರೆ ಅಂದು ಸಹ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲೇ ಉಳಿದಿದ್ದ. ನಂತರ ಪ್ರಕರಣವನ್ನ ಡಿಸೆಂಬರ್ 4ಕ್ಕೆ ಮೂಂದುಡಿತ್ತು. ಅಂದು ಸಹ ನ್ಯಾಯಾಲಯಕ್ಕೆ ಹಾಜರಾಗದೆ ಆಸ್ಪತ್ರೆಯಿಂದ ಪರಾರಿಯಾಗಿದ್ದ. ನ್ಯಾಯಾಲಯವೂ ಡಿಸೆಂಬರ್ 6 ರಂದು ಪ್ರಕರಣದ ತೀರ್ಪು ನೀಡಲು ಆರೋಪಿಯನ್ನ ಕರೆ ತರುವಂತೆ ಸೂಚಿಸಿದೆ.

ಆದರೆ ನಿನ್ನೆಯೂ ಸಹ ಆರೋಪಿ ನ್ಯಾಯಾಲಯಕ್ಕೆ ಗೈರಾಗಿದ್ದು, ಪ್ರಕರಣದ ತೀರ್ಪನ್ನ ಡಿಸೆಂಬರ್ 11 ಕ್ಕೆ ಮೂಂದೂಡಿದೆ. ಅಂದು ಆರೋಪಿಯನ್ನ ನ್ಯಾಯಾಲಯಕ್ಕೆ ಕರೆತರುವಂತೆ ನ್ಯಾಯಾಧೀಶರು ಪೊಲೀಸರಿಗೆ ಆದೇಶಸಿದ್ದು ತೀರ್ಪಿನಿ ದಿನವೇ ನಾಲ್ಕು ಬಾರಿ ಗೈರಾಗಿರುವ ಅಪರೂಪದ ಪ್ರಕರಣ ಇದಾಗಿದೆ.